BREAKING : ಎಲೆಕ್ಟ್ರಿಕ್ ಬೈಕ್ ಶೋರೂಂ ನಲ್ಲಿ ಅಗ್ನಿ ಅವಘಡ ಕೇಸ್ : ಮಾಲೀಕ ನಾಪತ್ತೆ, `FIR’ ದಾಖಲು!ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಎಲೆಕ್ಟ್ರಿಕ್ ಬೈಕ್ ಶೋರೂಂ ಅಗ್ನಿ ಅವಘಡದಲ್ಲಿ ಯುವತಿ ಮೃತಪಟ್ಟ ಬೆನ್ನಲ್ಲೇ ಶೋರೂಂ ಮಾಲೀಕ ನಾಪತ್ತೆಯಾಗಿದ್ದು, ಎಫ್ ಐಆರ್ ದಾಖಲಾಗಿದೆ.ಎಲೆಕ್ಟ್ರೀಕ್ ಬೈಕ್ ಶೋರೂಂ ಅಗ್ನಿ ಅವಘಡ ಸಂಬಂಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಎಲೆಕ್ಟ್ರಿಕ್ ಬೈಕ್ ಶೋರೂಂ ಮಾಲೀಕ ಪುನೀತ್ ಗೌಡ ನಾಪತ್ತೆಯಾಗಿರುವುದು ತಿಳಿದುಬಂದಿದೆ.ದುರಂತದಲ್ಲಿ ಸಜೀವದಹನವಾಗಿದ್ದ ಯುವತಿ ಪ್ರಿಯಾ ಸಹೋದರ ಪ್ರತಾಪ್ ನೀಡಿರುವ ದೂರಿನ ಮೇರೆಗೆ ಶೋ ರೂಂ ಮಾಲೀಕ, ಮ್ಯಾನೇಜರ್ ವಿರುದ್ಧ ಬಿಎನ್ ಎಸ್ ಸೆಕ್ಷನ್ 106ರಡಿ ಪ್ರಕರಣ ದಾಖಲಾಗಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆಯೇ? ಅಥವಾ ಇವಿ ಬೈಕ್ ಬ್ಯಾಟರಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.