Breaking: ತೀರ್ಥಹಳ್ಳಿ ತಹಸಿಲ್ದಾರ್ ಜಕ್ಕಣ್ಣ ಗೌಡರ್ ಹೃದಯಾಘಾತದಿಂದ ಸಾವು

ಶಿವಮೊಗ್ಗ(ಅ.16): ಜಿಲ್ಲೆಯ ತೀರ್ಥಹಳ್ಳಿ ತಹಸಿಲ್ದಾರ್ ಜಕ್ಕಣ್ಣ ಗೌಡರ್(56) ಇಂದು(ಬುಧವಾರ) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಜಕ್ಕಣ್ಣ ಗೌಡರ್ ಅವರು ತೀರ್ಥಹಳ್ಳಿಯ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಸ್‌ ಡ್ರೈವಿಂಗ್ ನಲ್ಲಿದ್ದಾಗಲೇ ಹೃದಯಾಘಾತ, 40 ಜನರ ಪ್ರಾಣ ಉಳಿಸಿ ಉಸಿರು ಚೆಲ್ಲಿದ ಚಾಲಕಕಾರ್ಯನಿಮತ್ತ ಜಕ್ಕಣ್ಣ ಗೌಡರ್ ನ್ಯಾಯಾಲಯದ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದರು. ಹೋಟೆಲ್‌ನಲ್ಲಿ ರೂಮ್ ಮಾಡಿ ಉಳಿದಿದ್ದರು. ಆದ್ರೆ ಹೃದಯಘಾತದಿಂದ ಜಕ್ಕಣ್ಣ ಗೌಡರ್ ನಿಧನರಾಗಿದ್ದಾರೆ. ಜಕ್ಕಣ್ಣಗೌಡರ್ ಮೂಲತಃ ಗದಗನವರಾಗಿದ್ದಾರೆ. ತಹಶೀಲ್ದಾರ್‌ ಜಕ್ಕಣ್ಣಗೌಡರ್ ಅವರು ಅ.14 ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದರು. ಇಂದು ಬೆಳಿಗ್ಗೆಯಿಂದ ಕುಟುಂಬಸ್ಥರು ಸಂಪರ್ಕಕ್ಕೆ ಪ್ರಯತ್ನಿಸಿದ್ದರು. ನಂತರ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ತಿಳಿಸಿದ್ದರು. ತೀರ್ಥಹಳ್ಳಿ ಪೊಲೀಸರು ಬೆಂಗಳೂರು ಪೊಲೀಸರ ಜತೆ ಸಂಪರ್ಕ ಸಾಧಿಸಿದ್ದರು. ನಂತರ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ರಾತ್ರಿ ಎಂಟು ಗಂಟೆಯ ಸುಮಾರಿಗೆ ರೂಮ್ ಬಾಗಿಲು ಓಪನ್ ಮಾಡಲಾಗಿದ್ದು ಈ ವೇಳೆ ಜಕ್ಕಣ್ಣ ಗೌಡರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುದಾಗಿ ಬೆಳಕಿಗೆ ಬಂದಿದೆ. ಇದುವರೆಗೆ ಘಟನೆಯ ನಿಖರ ಸಮಯ ತಿಳಿದು ಬಂದಿಲ್ಲ. ಸದ್ಯ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share with friends

Related Post

Leave a Reply

Your email address will not be published.