ಹೌದು ಈ ಕುರಿತು ಕಳೆದ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಆಯುಕ್ತರು, ಸೇರಿದಂತೆ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲಿನ ಸ್ಥಳೀಯರು ಪತ್ರ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿ ಖಾತಾ ಇರುವ ಜಾಗದಲ್ಲಿ ಆರು ಅಂತಸ್ತಿನ ಕಟ್ಟಡ ಕಟ್ಟುತ್ತಿರೋದು, ಕಳಪೆ ಕಾಮಗಾರಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಸ್ಥಳೀಯರು ಪತ್ರ ಬರೆದು ಎಚ್ಚರಿಸಿದ್ದಾರೆ. ಆದರೆ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಾಲೀಕ 40-60 ಅಡಿ ಅಂತಸ್ತಿನ ಕಟ್ಟಡವನ್ನು ಬಿ ಖಾತಾ ಜಾಗದಲ್ಲಿ ಖರೀದಿಸಿದ್ದಾರೆ.ಇವಳೆ ಗುತ್ತಿಗೆದಾರ ಮುನಿರಾಜು ಇದು ನಾನೇ ಕಟ್ಟಿದ್ದು ಗಟ್ಟಿಯಾಗಿದೆ ಎಂದು ಹೇಳಿದಾಗ ಮಾಲೀಕ ಇದರ ಮೇಲೇನೆ ನಾಲ್ಕು ಅಂತಸ್ತು ದಿನ ಕಟ್ಟಡ ನಿರ್ಮಿಸಲು ಅನುಮತಿ ಪಡೆದಿದ್ದಾನೆ.ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಪಡೆದು ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅಪಾರ್ಟ್‌ಮೆಂಟ್ ಅಂತಾ ಶುರುವಾಗಿ ಪಿಜಿ ಮಾಡುವ ಪ್ಲಾನ್ ಇತ್ತು ಎಂದು ಹೇಳಲಾಗುತ್ತಿದೆ. ಮಾಲೀಕ ಭುವನ್ ರೆಡ್ಡಿ, ಕಂಟ್ರಾಕ್ಟರ್ ಮುನಿರಾಜುಗೆ ಸಂಪೂರ್ಣ ಜವಾಬ್ದಾರಿ ನೀಡಿ ಬೇಕಾಬಿಟ್ಟಿ ಕಟ್ಟಡ ನಿರ್ಮಿಸಿರೋದು ಅವಘಡಕ್ಕೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.