BREAKING NEWS: ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಸಭೆ ಆರಂಭ

: ಕೆಲವೇ ಕ್ಷಣಗಳಲ್ಲಿ 58 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆರಾಜ್ಯ ವಿಧಾನಸಭಾ ಚುನಾವಣೆಗಾಗಿ ಬಾಕಿ ಇರುವಂತ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಂಬಂಧ, ಇದೀಗ ದೆಹಲಿಯ ಕಾಂಗ್ರೆಸ್ ವಾರ್ ರೂಂನಲ್ಲಿ ಮಹತ್ವದ ಹಿರಿಯ ನಾಯಕ ಸಭೆ ಆರಂಭಗೊಂಡಿದೆ. ಈ ಸಭೆಯ ಬಳಿಕ ಬಾಕಿ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.ನವದೆಹಲಿಯ ಜಿಆರ್ ಜಿ ರಸ್ತೆಯ ಕಾಂಗ್ರೆಸ್ ವಾರ್ ರುಂನಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಆರಂಭಗೊಂಡಿದೆ. ಈ ಸಭೆಯಲ್ಲಿ ಬಾಕಿ 58 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾಯಕರು ಚರ್ಚೆ ನಡೆಸಲಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಇದಲ್ಲದೇ ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರಕ್ಕೆ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ನೀಡಬೇಕೋ ಅಥವಾ ಎ ಸಿ ಶ್ರೀನಿವಾಸ್ ಗೆ ನೀಡಬೇಕೋ ಎನ್ನುವ ಬಗ್ಗೆಯೂ ಚರ್ಚ ನಡೆಸಲಿದ್ದಾರೆ.ದೇವನಹಳ್ಳಿ ಕ್ಷೇತ್ರದ ಬದಲು ಪುಲಕೇಶಿ ನಗರಕ್ಕೆ ಟಿಕೆಟ್ ಕೇಳಿರುವಂತ ಎ.ಸಿ ಶ್ರೀನಿವಾಸ್ ಗೆ ನೀಡೋ ಬಗ್ಗೆಯೂ ಚರ್ಚೆ ನಡೆದ್ರೇ, ಮಾಜಿ ಮೇಯರ್ ಸಂಪತ್ ರಾಜ್ ಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ನೀಡಬೇಕು ಎಂಬುದಾಗಿ ಒತ್ತಡ ಕೇಳಿ ಬಂದಿರೋ ಬಗ್ಗೆ ಚರ್ಚೆ ನಡೆಯಲಿದೆ. ಈ ಬಳಿಕ ಬಾಕಿ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಘೋಷಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಆ ಬಗ್ಗೆ ಕಾದು ನೋಡಬೇಕಿದೆ.

Share with friends

Related Post

Leave a Reply

Your email address will not be published.