BREAKING NEWS: ‘ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ’ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆ | Former DCM Laxman Savadi joins Congress

ನಗರದ ಸಭಾಪತಿ ಬಸವರಾಜ ಹೊರಟ್ಟಿ ಅವರ ಸರ್ಕಾರಿ ನಿವಾಸಕ್ಕೆ ಇಂದು ಭೇಟಿಯಾಗಿದ್ದಂತ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ತಮ್ಮ ಬಿಜೆಪಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಮುನ್ನ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ, ತಮಗೆ ನೀಡಿದ್ದಂತ ವಿವಿಧ ಹುದ್ದೆಗೂ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಸಲ್ಲಿಸಿದ್ದರು ಈ ಬೆನ್ನಲ್ಲೆ ಸಭಾಪತಿ ನಿವಾಸದಿಂದ ನೇರವಾಗಿ ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವಂತ ಕೆಪಿಸಿಸಿ ಕಚೇರಿಗೆ ತೆರಳಿದಂತ ಲಕ್ಷ್ಮಣ್ ಸವದಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸಮ್ಮುಖದಲ್ಲಿ ಹೂ ಬಿಟ್ಟು, ಕೈಯನ್ನು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಿಡಿದಿದ್ದಾರೆ. ಈ ಮೂಲಕ ಬಿಜೆಪಿಗೆ ಗುಡ್ ಬೈ ಹೇಳಿಕ, ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತಲಾಗಿ ಸೇರ್ಪಡೆಗೊಂಡಿದ್ದಾರೆ.ಈ ವೇಳೆ ಮಾತನಾಡಿದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತಮಗೆಲ್ಲ ಆಶ್ಚರ್ಯ ಎನಿಸಬಹುದು. ಇಡೀ ರಾಜ್ಯದಲ್ಲಿ 63 ಕ್ಷೇತ್ರದಲ್ಲಿ ಬಿಜೆಪಿಯ ನಾಯಕರು, ಬಂಡಾಯವೆದ್ದು ಜೆಡಿಎಸ್ ಸೇರುತ್ತಿದ್ದಾರೆ. ಶೇ.90ರಷ್ಟು ಮಂದಿ ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ ಎಂದರು.

ಲಕ್ಷ್ಮಣ್ ಸವದಿ ಮಾಜಿ ಡಿಸಿಎಂ ಆಗಿದ್ದವರು. ಐದು ವರ್ಷಗಳ ಪರಿಷತ್ ಸದಸ್ಯರಾಗಿದ್ದವರು. ಶಾಸಕರಾಗಿ, ಸಹಕಾರ ಸಚಿವರಾಗಿದ್ದವರು. ಬಿಜೆಪಿ ರಾಷ್ಟ್ರ ನಾಯಕರ ಜೊತೆಗೊ ಸಂಪರ್ಕ ಹೊಂದಿದ್ದವರು. ಇಂತವರಿಗೆ ನುಡಿದಂತೆ ನಡೆಯದೇ ಟಿಕೆಟ್ ನೀಡಿಲ್ಲ. ಇವತ್ತು ಆ ಬೇಸರದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ನಾನು ಪಕ್ಷದ ಅಧ್ಯಕ್ಷನಾಗಿ ತುಂಬು ಹೃದಯದ ಸ್ವಾಗತವನ್ನು ಕೋರುತ್ತಿದ್ದೇನೆ ಎಂದರು.ಇವತ್ತು ಬಾಬಾ ಸಾಬ್ ಅಂಬೇಡ್ಕರ್ ಅವರ ಜನ್ಮದಿನ. ಆ ಜನ್ಮದಿನ ದಿನದಂದೇ ಲಕ್ಷ್ಮಣ್ ಸವದಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇವರೊಂದಿಗೆ ಇತರೆ ಜಿಲ್ಲೆಯ ನಾಯಕರು ಬಿಜೆಪಿ ತೊರೆದು, ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಎಂದರು.

Share with friends

Related Post

Leave a Reply

Your email address will not be published.