ಪಕ್ಷೇತರನಾಗಿ ಸ್ಪರ್ಧಿಸೋ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಅತ್ತ ಬಿಜೆಪಿಯಲ್ಲಿ ಯೋಗೇಶ್ವರ್ ರಾಜೀನಾಮೆ ನೀಡುತ್ತಿದ್ದರೆ, ಇತ್ತ ಜೆಡಿಎಸ್ (JDS) ಹಾಗೂ ಕಾಂಗ್ರೆಸ್‌ನಲ್ಲಿ (Congress) ಬಿರುಸಿನ ಚಟುವಟಿಕೆ ಶುರುವಾಗಿದೆ. ಮಾಜಿ ಪ್ರಧಾನಿ ದೇವೇಗೌಡರು (HD Deve Gowda) ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು (Nikhil Kumaraswamy) ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆ. ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ತಮ್ಮ ಸಹೋದರ ಡಿಕೆ ಸುರೇಶ್‌ಗೆ (DK Suresh) ಕಾಲ್ ಮಾಡಿದ್ದು, ಚುನಾವಣೆಗೆ ರೆಡಿಯಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಡಿಕೆ ಸುರೇಶ್‌ಗೆ ಡಿಕೆ ಶಿವಕುಮಾರ್ ಕಾಲ್ಯೋಗೇಶ್ವರ್ ಬಂಡಾಯವಾಗಿ ಸ್ಪರ್ಧೆ ಖಚಿತ ಹಿನ್ನೆಲೆಯಲ್ಲಿ ಚನ್ನಪಟ್ಟಣ ಗೆಲುವಿಗೆ ಕಾಂಗ್ರೆಸ್ ರಣತಂತ್ರ ಹೂಡಿದೆ. ಅತ್ತ ಯೋಗೇಶ್ವರ್ ರಾಜೀನಾಮೆ ನೀಡುತ್ತಿದ್ದಂತೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಸಹೋದರ ಡಿಕೆ ಸುರೇಶ್‌ಗೆ ಕಾಲ್ ಮಾಡಿದ್ದಾರೆ ಎನ್ನಲಾಗಿದೆ.
ಚುನಾವಣೆಗೆ ರೆಡಿಯಾಗುವಂತೆ ಡಿಕೆಶಿ ಸೂಚನೆಸಹೋದರನಿಗೆ ಕರೆ ಮಾಡಿರುವ ಡಿಕೆಶಿ, ಚನ್ನಪಟ್ಟಣ ಉಪ ಚುನಾವಣೆ ಸ್ಪರ್ಧೆಗೆ ರೆಡಿ ಇರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲೆಗಳನ್ನು ಸಿದ್ದ ಮಾಡಿಕೊ ಅಂತ ಸೂಚನೆ ನೀಡಿದ್ದಾರಂತೆ.’ಸೈನಿಕ’ನ ಸಂಪರ್ಕಿಸಿದ್ರಾ ಕಾಂಗ್ರೆಸ್ ನಾಯಕರು?
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆಯೇ ಕಾಂಗ್ರೆಸ್ ನಾಯಕರು ಸಿಪಿ ಯೋಗೇಶ್ವರ್ ಅವರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ದಳಪತಿ ಕುಮಾರಸ್ವಾಮಿಯವರಿಗೆ ಟಕ್ಕರ್ ಕೊಡಲೇಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಹೀಗಾಗಿ ಯೋಗೇಶ್ವರ್ ಸೆಳೆಯೋ ಯತ್ನ ನಡೆದಿದೆ ಎನ್ನಲಾಗಿದೆ.ಸಿದ್ದರಾಮಯ್ಯ, ಡಿಕೆಶಿ ಅನುಮತಿ ನೀಡಿದ್ರಾ?ಇನ್ನೊಂದೆಡೆ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಟ್ಟರೆ ಗೆಲುವು ಸುಲಭ ಹಾಗೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಪ್ರಾಬಲ್ಯ ಮುರಿಯಬಹುದು ಎಂದು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೂಡ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಸ್ಥಾನಕ್ಕೆ ಯೋಗೇಶ್ವರ್ ರಾಜೀನಾಮೆ!ಸಿಪಿ ಯೋಗೇಶ್ವರ್ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಸದಸ್ಯರಾಗಿದ್ದರು. ಇದೀಗ ತಮ್ಮ ಸ್ಥಾನಕ್ಕೆ ಸಿಪಿವೈ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯಲ್ಲಿ ಇರೋದ್ರಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಯೋಗೇಶ್ವರ್, ಖುದ್ದು ರಾಜೀನಾಮೆ ಪತ್ರ ಬರೆದುಕೊಟ್ಟು, ಸಭಾಪತಿಗೆ ಸಲ್ಲಿಸಿದ್ದಾರೆ.ಎಲ್ಲವೂ ಸರಿಯಾಗೋ ವಿಶ್ವಾಸ ನನಗಿದೆಇನ್ನು ಯೋಗೇಶ್ವರ್ ರಾಜೀನಾಮೆ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿಯ ಶಿಗ್ಗಾಂವಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಬೊಮ್ಮಾಯಿ, ಆ ವಿಚಾರ ನಿಜವಾಗ್ಲೂ ನನಗೆ ಗೊತ್ತಿಲ್ಲ. ನಿನ್ನೆ ತಡರಾತ್ರಿವರೆಗೂ ಹೊಂದಾಣಿಕೆ ಮಾಡೋ ಪ್ರಯತ್ನ ನಡೆದಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಅವರ ಜೊತೆಗೆ ಮಾತನಾಡುತ್ತಾರೆ.
ಕಾಂಗ್ರೆಸ್ ಸಂಪರ್ಕಿಸಿರೋ ವಿಚಾರ ಗೊತ್ತಿಲ್ಲವಿಧಾನಸಭೆಗೆ ಸ್ಪರ್ಧೆ ಮಾಡೋ ಇಂಗಿತ ಅವರಿಗಿದೆ. ಆದರೆ ಕುಮಾರಸ್ವಾಮಿ ಮತ್ತು ಅವರ ಮಧ್ಯೆ ತೀರ್ಮಾನವಾಗಬೇಕಿತ್ತು. ಹೈಕಮಾಂಡ್ ಮದ್ಯ ಪ್ರವೇಶ ಮಾಡಿದ್ರೆ ಎಲ್ಲ ಸರಿಯಾಗುತ್ತದೆ. ಯೋಗೇಶ್ವರ್ ಜೊತೆ ಕಾಂಗ್ರೆಸ್ ಸಂಪರ್ಕ ಇದೆ ಎಂಬುವುದು ನನಗೆ ಗೊತ್ತಿಲ್ಲ ಅಂತ ಬಸವರಾಜ ಬೊಮ್ಮಾಯಿ ಹೇಳಿದ್ರು.(ವರದಿ: ಕೃಷ್ಣ ಜಿ.ವಿ., ನ್ಯೂಸ್ 18 ಕನ್ನಡ, ಬೆಂಗಳೂರು)