Channapatna: ಸುಮಲತಾಗೆ ಶಿವರಾಮೇಗೌಡ ಅವಹೇಳನ ಮಾಡಿದ್ದಕ್ಕೆ ನಿಖಿಲ್‌ಗೆ ಸೋಲು, ಈಗ ಯೋಗೇಶ್ವರ್ ಸರದಿ! ಹೀಗಂದಿದ್ದೇಕೆ ಜೆಡಿಎಸ್ ಶಾಸಕ?

ರಾಜ್ಯದಲ್ಲಿ ತೆರವಾಗಿರುವ ಮೂರು ಕ್ಷೇತ್ರಗಳಿಗೆ ಉಪಚುನಾವಣೆ (By-Election) ದಿನಾಂಕ ಘೋಷಣೆಯಾಗಿದ್ದು, ಮೂರು ಪಕ್ಷಗಳಿಂದ ಪ್ರಚಾರ ಕಾರ್ಯ ಜೋರಾಗಿ ನಡೆದಿದೆ. ಇದರ ನಡುವೆ ಚನ್ನಪಟ್ಟಣ (Channapatna) ಕ್ಷೇತ್ರದ ಉಪಚುನಾವಣೆ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗುತ್ತಿದೆ.

ಅದರಲ್ಲೂ ಕಾಂಗ್ರೆಸ್ ಹಾಗೂ ದೇವೇಗೌಡ ಕುಟುಂಬದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತದೆ ಎಂಬ ಮಾಜಿ ಸಂಸದ ಶಿವರಾಮೇಗೌಡರ (Shivaramegowda) ಹೇಳಿಕೆಗೆ ಶಾಸಕ ಕಂದಕೂರ (Kandakur) ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಶಿವರಾಮೇಗೌಡರ ವಿರುದ್ಧ ಕಂದಕೂರ ಆಕ್ರೋಶ

ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತೆ ಎಂಬ ಶಿವರಾಮೆಗೌಡ ಹೇಳಿಕೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಶರಣು ಗೌಡ ಕಂದಕೂರ, ಈ ಹಿಂದೆ ಶಿವರಾಮೇಗೌಡ ಅವರು ಸುಮಲತಾ ಅವರಿಗೆ ಅವಹೇಳನವಾಗಿ ಮಾತಾಡಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಗಿತ್ತು. ಈಗ ಶಿವರಾಮೆಗೌಡ ಅವರು ಕಾಂಗ್ರೆಸ್ ಗೆ ಬಂದು ಸಿಪಿ ಯೋಗೇಶ್ವರ್ ಅವರನ್ನು ಸೋಲಿಸುವ ಎಲ್ಲಾ ಬೆಳವಣಿಗೆ ನಡೆದಿವೆ ಎಂದು ಶಾಸಕ ಕಂದಕೂರ ಹೇಳಿದರು.ಸಿಪಿವೈ ಸೋಲಿಸಲು ಸಂಚು

ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ನಿಂದ ನಿಲ್ಲಿಸಿ ಸೋಲಿಸಲು ವ್ಯವಸ್ಥಿತವಾದ ಸಂಚು ರೂಪಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೆಗೌಡ ಸಂಸತ್‌ಗೆ ಹೇಗೆ ಹೋಗುತ್ತಿದ್ರು, ಕಾಂಗ್ರೆಸ್‌ನಲ್ಲಿ ಇದ್ದಾಗ ಬಿಜೆಪಿಗೆ, ಬಿಜೆಪಿನಲ್ಲಿದ್ದಾಗ ಜೆಡಿಎಸ್‌ಗೆ ಬೈಯೋದು ಅವರ ಬಾಯಿ ಚಟ. ಶಿವರಾಮೆಗೌಡ ಕೃತಜ್ಞತೆ ಹೀನರಿದ್ದಾರೆಂದು ನನಗೆ ಅನಿಸುತ್ತಿದೆ. ಸೋತು ಸುಣ್ಣವಾದ ಶಿವರಾಮೆಗೌಡ ಅವರಿಗೆ ದೇವೇಗೌಡರ ಕುಟುಂಬ ಸಂಸತ್ತಿಗೆ ಕಳಿಸಿದೆ. ಆ ಋಣ ನಿಮಗೆ ಇಲ್ಲ ಎಂದು ಅವರು ಕಿಡಿಕಾರಿದರು.ಶಿವರಾಮೇಗೌಡರು ಕಾಂಗ್ರೆಸ್‌ಗೆ ಹೋಗಲು ರೆಡಿಯಾಗಿದ್ದಾರೆ

ಈಗ ಬಿಜೆಪಿಯಲ್ಲಿ ಏನೂ ಆಗಿಲ್ಲ ಅಂತ ಕಾಂಗ್ರೆಸ್ ಹೋಗಲಿಕ್ಕೆ ರೆಡಿ ಆಗಿದ್ದೀರಿ, ಯಾರು ಯಾರನ್ಯಾಕೆ ಬಲಿ ಪಡೀತಾರೆ. ನಿಖಿಲ್ ಕುಮಾರಸ್ವಾಮಿ ಗೆಲುವು ಶತಸಿದ್ಧ, ಹಿಂದೆ ಶಿವರಾಮೆಗೌಡ ಅವರು ಸುಮಲತಾ ಅವರಿಗೆ ಅವಹೇಳನ ಮಾಡಿದ್ದಕ್ಕೆ ನಿಖಿಲ್ ಗೆ ಸೋಲಾಯ್ತು ಈಗ ಶಿವರಾಮೆಗೌಡ ಅವರು ಕಾಂಗ್ರೆಸ್ ಗೆ ಬಂದು ಸಿಪಿ ಯೋಗೇಶ್ವರ್ ಅವರನ್ನು ಸೋಲಿಸುವ ಎಲ್ಲಾ ಬೆಳವಣಿಗೆ ನಡೆದಿವೆ. ಸಿಪಿವೈ ಸೋಲಿಸಲು ವ್ಯವಸ್ಥಿತವಾದ ಸಂಚು ರೂಪಿಸುತ್ತಿದ್ದಾರೆ ಎಂದರು.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ

ಇನ್ನೂ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರು ಇತ್ತೀಚೆಗೆ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೆರ್ತಾರೆಂಬ ಹೇಳಿಕೆಗೆ ತಿರುಗೇಟು ನೀಡಿದ ಕಂದಕೂರ ಅವರು, ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗ್ತಾರೋ ಅಥವಾ ಕಾಂಗ್ರೆಸ್ ನಿಂದ ಎಷ್ಟು ಜನ ಶಾಸಕರು ವಿಜಯೇಂದ್ರ, ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆಂಬುದು ಗೊತ್ತಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನವರು 8 ಜನರಿಗೆ ಆಪರೇಷನ್ ಮಾಡಿದ್ರೆ, ಎನ್‌ಡಿಎ ಅವರು 20 ಜನರಿಗೆ ಆಪರೇಷನ್ ‌ಮಾಡ್ತಾರೆ. ಕಾಂಗ್ರೆಸ್ ನ ಶಾಸಕರು ಅವರಾಗಿ ಅವರೇ ಬಂದರೆ ಸೇರಿಸಿಕೊಳ್ಳೋಣ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ‌ಕೆಲಸ ಆಗ್ತಿಲ್ಲ ಹಾಗಾಗಿ ಅನೇಕ ಜನ ಶಾಸಕರು ಕುಮಾರಸ್ವಾಮಿ, ವಿಜಯೇಂದ್ರ ಸಂಪರ್ಕದಲ್ಲಿ ಇರಬಹುದು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ದಿಯಾಗುತ್ತಿಲ್ಲಅನೇಕ ಸಲ ಅಭಿವೃದ್ಧಿ ಕಾಮಗಾರಿ ಆಗ್ತಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಬಿದ್ದಿರುವ ಉದಾಹರಣೆಗಳು ಕೂಡ ಇವೆ, ಸಿದ್ದರಾಮಯ್ಯ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿವರೆಗೆ ಕಾಂಗ್ರೆಸ್ ಸರ್ಕಾರ, ಅವರು ಕೆಳಗಿಳಿದ್ಮೇಲೆ ಕಾಂಗ್ರೆಸ್ ಸರ್ಕಾರಕ್ಕೆ ಕೊನೆ ಮೊಳೆ ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Share with friends

Related Post

Leave a Reply

Your email address will not be published.