Cyclone Dana: ಡಾನಾ ರೌದ್ರಾವತಾರ, ಗಂಟೆಗೆ 120 ವೇಗದ ಬಿರುಗಾಳಿ ಸಹಿತ ರಾಜ್ಯಗಳಿಗೆ ಭಾರೀ ಮಳೆ

ಅಕ್ಟೊಬರ್ 22: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ‘ಡಾನಾ’ ಚಂಡಮಾರುತವಾಗಿ ಬದಲಾಗಿ 48 ಗಂಟೆ ಕಳೆದಿವೆ. ಇದೀಗ ಆ ಚಂಡಮಾರುತವು ರೌದ್ರಾವತಾರ ತಾಳಿದೆ. ಅಕ್ಟೋಬರ್ 25ರಂದು ಕರಾವಳಿಗೆ ಅಪ್ಪಳಿಸಲಿದೆ. ಅಲ್ಲಿಯವರೆಗೆ ಈ ‘ಡಾನಾ’ ಚಂಡಮಾರುತ ಪ್ರಭಾವದಿಂದಾ ಬಿರುಗಾಳಿ ಸಹಿತ ದೇಶದ ಈ ವಿವಿಧ ರಾಜ್ಯಗಳಿಗೆ ಭರ್ಜರಿ ಮಳೆ

ಪ್ರತಿ ಗಂಟೆಗೆ 100-110 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಮುಂದಿನ ಎರಡೇ ದಿನದಲ್ಲಿ ಇದರ ವೇಳೆ ಗಂಟೆಗೆ 120 ಕಿಮೀ ಹೆಚ್ಚಲಿದೆ. ಈ ವೈಪರಿತ್ಯವು ತೀವ್ರಗೊಂಡು ಅಕ್ಟೋಬರ್ 24-25 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ. ಈ ಎರಡು ರಾಜ್ಯ ಸೇರಿ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಭಾರೀ ಮಳೆ ಆಗುತ್ತಿದೆ. ಮುಂದಿನ ಮೂರು ದಿನವು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share with friends

Related Post

Leave a Reply

Your email address will not be published.