ದಾವಣಗೆರೆ (Davanagere): ಚರಂಡಿಗಳಿಗೆ ಸ್ಲಾಬ್ ಅಳವಡಿಸಬೇಕು, ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸುವ ಮೂಲಕ ಜನರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದ ಆಜಾದ್ ನಗರ ಬ್ರಾಂಚ್ ಸಮಿತಿ ಕಾರ್ಯಕರ್ತರು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.ನಗರದ 12ನೇ ವಾರ್ಡಿನ ಆಜಾದ್ ನಗರದ ಮಾಗನಹಳ್ಳಿ ರಸ್ತೆಯ ಸರ್ಕಾರಿ ಶಾಲೆ ಪಕ್ಕದಲ್ಲೇ ಇರುವ ಒಳಚರಂಡಿ ಮತ್ತು ಚರಂಡಿಯಿಂದ ಸದಾ ರಸ್ತೆಯ ಮೇಲೆ ನೀರು ಉಕ್ಕಿ ಹರಿಯುವುದರಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನರು, ಶಾಲಾ ಮಕ್ಕಳು ಮತ್ತು ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಮಳೆ ಬಂದಾಗ ಸಮಸ್ಯೆ ಹೇಳಲು ಸಾಧ್ಯವಿಲ್ಲದಷ್ಟು ವಿಪರೀತ ಎನಿಸುವಷ್ಟು ಭಾಸವಾಗುತ್ತದೆ.