Davanagere | ಹರಿಹರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ : ಆರೋಪಿತೆಯರ ಬಂಧನ safgroupPosted on October 31, 2024 Saf news job education No Comments ದಾವಣಗೆರೆ (Davanagere): ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಂಗಾರದ ಆಭರಣ ಕಳ್ಳತನ ಮಾಡುತ್ತಿದ್ದ ಆರೋಪಿತೆಯರನ್ನು ಪೊಲೀಸರು ಬಂಧಿಸಿದ್ದಾರೆ.ಕಲ್ಬುರ್ಗಿಯ ಸುನೀತಾ, ರಾತಿಯಾ ಉಪಾಧ್ಯಾಯ ಬಂಧಿತರ ಆರೋಪಿತರು.ಹರಿಹರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ತಮ್ಮ ಕೊರಳಲ್ಲಿ ಇದ್ದ ಬಂಗಾರದ ಮಾಂಗಲ್ಯ ಚೈನ್ ಕಳ್ಳತನವಾದ ಬಗ್ಗೆ ಕುಮಾರ ಪಟ್ಟಣಂ ವಾಸಿ ಪವಿತ್ರ.ಪಿ 13-02-2024 ರಂದು ತಮ್ಮ ಸ್ವಂತ ಊರಾದ ನಾಗಸಮುದ್ರ ಗ್ರಾಮಕ್ಕೆ ಹೋಗಲು ಶಿವಮೊಗ್ಗ ಬಸ್ ಹತ್ತುವಾಗ ನೂಕುನುಗ್ಗಲಿನಲ್ಲಿ ತಮ್ಮ ಕೊರಳಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳತನವಾಗಿರುವ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ದಿ : 15-02-2024 ರಂದು ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರ ಪತ್ತೆಗಾಗಿ ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ ಹಾಗೂ ಮಂಜುನಾಥ ಮತ್ತು ಡಿವೈಎಸ್ಪಿ ಬಸವರಾಜ ಬಿ.ಎಸ್., ಮಾರ್ಗದರ್ಶನದಲ್ಲಿ ಹರಿಹರ ನಗರಠಾಣೆ ಪಿಐ ದೇವಾನಂದ ನೇತೃತ್ವದ ತಂಡ ಪಿಎಸ್‌ಐಗಳಾದ ಶ್ರೀಪತಿ ಗಿನ್ನಿ, ವಿಜಯ ಹಾಗೂ ಸಿಬ್ಬಂದಿಗಳ ತಂಡ ಆರೋಪಿತ ಮಹಿಳೆಯರನ್ನು ಅ.30 ರಂದು ಪುನಃ ಕಳ್ಳತನ ಮಾಡಲು ಬಂದಾಗ ಹರಿಹರ ನಗರ ಪೊಲೀಸರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು 35 ಗ್ರಾಂ ತೂಕದ ಬಂಗಾರದ ಸರ ಹಾಗೂ ಶಿಕಾರಿಪುರ ನಗರ ಠಾಣೆ ಅಪರಾಧ ದಾಖಲಾದ ಪ್ರಕರಣದಲ್ಲಿ 30 ಗ್ರಾಂ ತೂಕದ ಬಂಗಾರದ ಕೊರಳ ಚೈನ್ ಒಟ್ಟು 4,50,000/- ರೂ ಮೌಲ್ಯದ 65 ಗ್ರಾಂ ತೂಕದ ಬಂಗಾರದ ಆಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ. Post Views: 18 Share with friends