ಒಳ ಮಿಸಲಾತಿಗೆ ನಮ್ಮ ತಕರಾರಿಲ್ಲ. ಆದರೆ ಅಂಕಿ ಅಂಶಗಳ ಸರಿಯಿಲ್ಲ ಎನ್ನುವ ಅಭಿಪ್ರಾಯ ಬಂದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಮೊದಲು ಶಾಸಕರ ಸಭೆ ನಡೆಸಿದಾಗ ಒಳ ಮಿಸಲಾತಿ ಬೇಡ ಎಂದು ಹೇಳಿದ್ದರು.
ಆದರೆ ಚಿತ್ರದುರ್ಗದಲ್ಲಿ ಸಭೆ ನಡೆಸಿದಾಗ ಒಳ ಮೀಸಲಾತಿಗೆ ಒಪ್ಪಿಕೊಳ್ಳುತ್ತೇವೆ. ಆದರೆ ಅಂಕಿ ಅಂಶಗಳನ್ನು ಸರಿಪಡಿಸಿಕೊಳ್ಳಿ. ಅಂಕಿ ಅಂಶ ಸರಿ ಇಲ್ಲದೇ ಯಾರಿಗೆ ಎಷ್ಟು ಶೇಕಡಾ ಮೀಸಲಾತಿ ನೀಡುತ್ತೀರಿ ಎಂದು ಸಲಹೆ ನೀಡಿದ್ದಾರೆ ಎಂದರು.ಬಿಜೆಪಿಯವರು ಒಳ ಮೀಸಲಾತಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಪಕ್ಷದವರೇ ಒಳ ಮೀಸಲಾತಿ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.ಮಹಾರಾಷ್ಟ್ರ ಚುನಾವಣೆಯ ನಿಮಿತ್ತ ಅಶೋಕ್ ಗೆಹ್ಲೋಟ್ ಹಾಗೂ ನನಗೆ ಮುಂಬೈ ಹಾಗೂ ಕೊಂಕಣ್ ಕ್ಷೇತ್ರ ಜವಾಬ್ದಾರಿಯನ್ನು ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಈಗಿನ ಸರ್ಕಾರ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಅಷ್ಟೇ ಅಲ್ಲದೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಸ್ಪಷ್ಟ ಬಹುಮತದಿಂದ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.