Girl Got Married to Brother: ಹಿಂದೂ ಧರ್ಮದಲ್ಲಿ ಸೋದರ ಮತ್ತು ಸೋದರಿಯ ಸಂಬಂಧವನ್ನು ಪವಿತ್ರ ಎಂದು ಹೇಳಲಾಗಿದೆ. ಸೋದರಿಯಲ್ಲಿ ತಾಯಿಯನ್ನು ಕಾಣಬೇಕು ಎಂದು ಹೇಳಲಾಗುತ್ತದೆ. ದೂರದ ಸೋದರ ಸಂಬಂಧಿಯಾಗಿದ್ರೂ, ಮಹಿಳೆಯರು ರಕ್ಷಾ ಬಂಧನದಂದು ರಾಕಿ ಕಳುಹಿಸುತ್ತಾರೆ. ರಕ್ಷಾ ಬಂಧನ ಸಮೀಪಿಸುತ್ತಿದ್ದಂತೆ ಮಹಿಳೆಯರು ಸಂಬಂಧದಲ್ಲಿ ಸೋದರರಾಗುವ ಮತ್ತು ಆಪ್ತ ಗೆಳೆಯರಿಗೆ ರಾಕಿಯನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಂದೆ ಮಗಳನ್ನು, ಮಗ ತಾಯಿಯನ್ನು ಮದುವೆಯಾದ್ರು ಎಂಬ ಬರಹವುಳ್ಳ ಫೋಟಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ನಡುವೆ ಯುವತಿಯೋರ್ವಳು ಸೋದರನನ್ನೇ ಮದುವೆಯಾಗಿರೋದಾಗಿ ಹೇಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋವನ್ನು @sunilbha965 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಯುವತಿ ದೊಡ್ಡದಾದ ಸಿಂಧೂರ ಹಚ್ಚಿಕೊಂಡಿದ್ದು, ಪಟಪಟ ಅಂತ ಹೇಳಲು ಆರಂಭಿಸುತ್ತಾಳೆ. ಯುವತಿ ಪಕ್ಕದಲ್ಲಿರುವ ನಿಂತಿರುವ ಹುಡುಗನನ್ನು ತೋರಿಸುತ್ತಾ, ಇವನು ನನ್ನ ಸೋದರ, ನಾನು ಇವನಿಗೆ ಸೋದರಿ ಆಗಬೇಕು ಎಂದು ಹೇಳುತ್ತಾನೆ. ನಂತರ ಮಾತು ಮುಂದುವರಿಸುವ ಯುವತಿ, ನಾವಿಬ್ಬರು ಪ್ರೀತಿಸುತ್ತಿದ್ದೇವೆ. ಈಗ ಈತನ ಮಗುವಿಗೆ ನಾನು ತಾಯಿ ಆಗುತ್ತಿದ್ದೇನೆ. ನಮ್ಮಿಬ್ಬರ ಪ್ರೀತಿಯನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ.
ಈ ವಿಡಿಯೋ ಎಲ್ಲಿಯದ್ದು? ವಿಡಿಯೋದಲ್ಲಿರುವ ಯುವತಿ ಮತ್ತು ಯುವಕ ಯಾರು ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮದುವೆ ಆದಂತೆ ಇಬ್ಬರು ಕೊರಳಲ್ಲಿ ಹೊವಿನ ಮಾಲೆಯನ್ನು ಹಾಕಿಕೊಂಡಿರೋದನ್ನು ಗಮನಿಸಬಹುದು. ಈ ವಿಡಿಯೋಗೆ 86 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು 5 ಸಾವಿರದವರೆಗೆ ಕಮೆಂಟ್ಸ್ ಬಂದಿವೆ.
ಈ ವಿಡಿಯೋ ನೋಡಿದ ನೆಟ್ಟಿಗರು, ಇಬ್ಬರಿಗೂ ಛೀಮಾರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಉದ್ದೇಶದಿಂದ ಇವರಿಬ್ಬರು ನಾಟಕ ಮಾಡುತ್ತಿದ್ದಾರೆ? ಈ ರೀತಿ ಲೈಕ್ಸ್ ಗಾಗಿ ಹಿಂದೂ ಧರ್ಮಕ್ಕೆ ಅವಮಾನ ಮಾಡಬೇಡಿ ಎಂದು ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂಥ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೊದಲು ನೂರು ಬಾರಿ ಯೋಚಿಸಿ. ಇದರಿಂದ ನಿಮ್ಮ ಪೋಷಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಎಂಬುದನ್ನು ಅರ್ಥ ಮಾಡ್ಕೊಳ್ಳಿ ಎಂದು ಸಲಹೆ ನೀಡಿದ್ದಾರೆ