ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1) ರಲ್ಲಿ ರಾಜ್ಯ ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ದಿನಾಂಕ:01-01-2016 ರಿಂದ 31-12-2020 ರವರೆಗೆ ನಿಧನ, ನಿವೃತ್ತಿ, ರಾಜಿನಾಮೆ ಮತ್ತು ಇತರ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡಲು ಸದರಿ ಸರ್ಕಾರದ ಆದೇಶದಲ್ಲಿ ಅನುಮತಿ ನೀಡಲಾಗಿದೆ. ಸದರಿ ಆದೇಶದಲ್ಲಿ ಅನುದಾನಿತ ಪ್ರೌಢ ಶಾಲೆಗಳ ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆಯನ್ನು ಆನ್ ಲೈನ್ ತಂತ್ರಾಂಶದ ಮೂಲಕ ನಿರ್ವಹಿಸಲು ತಂತ್ರಾಂಶವನ್ನು ಅಭಿವೃದಿ ಪಡಿಸಿ ಪುಸ್ತಾವನೆಗಳನ್ನು ವ್ಯವಹರಿಸಲು ನಿರ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ನೇಮಕಾತಿ ಪ್ರಕ್ರಿಯೆಯನ್ನು ಆನ್ ಲೈನ್ ಮುಖಾಂತರ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ.
ಖಾಸಗಿ ಅನುದಾನಿತ ಪ್ರೌಢ ಶಾಲೆಗಳಲ್ಲಿ ನಿಧನ, ನಿವೃತ್ತಿ, ರಾಜಿನಾಮೆ ಮತ್ತು ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ವ್ಯವಹರಿಸಲು ಮೊದಲನೇ ಹಂತದಲ್ಲಿ ಖಾಸಗಿ ಅನುದಾನಿತ ಪ್ರೌಢ ಶಾಲೆಗಳ ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಕಾರ್ಯವನ್ನು ಡಿಡಿಓ ಗಳಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ವಹಿಸಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಥಮ ಭಾಗವಾಗಿ BEO Login ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಸದರಿ ತಂತ್ರಾಂಶದಲ್ಲಿ ಮಾಹಿತಿಗಳನ್ನು ಇಂದೀಕರಿಸಿರುವ ಬಗ್ಗೆ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯದ ಎಲ್ಲಾ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಸಂಬಂಧಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರೊಂದಿಗೆ ದಿನಾಂಕ:12-11-2024 ರಂದು ಪೂರ್ವಹ್ನ: 11.00 ರಿಂದ 01.00 ಗಂಟೆಯವರೆಗೆ ಮಾನ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದ ಸಭೆ ಏರ್ಪಡಿಸಲಾಗಿದೆ.
ಸದರಿ ಸಭೆಗೆ ಆಯುಕ್ತಾಲಯಗಳ ನಿರ್ದೇಶಕರು ತಪ್ಪದೇ ಹಾಜರಾಗಲು ಕೋರಿದೆ. ಸದರಿ ವಿಡಿಯೋ ಸಂವಾದ ಸಭೆಗೆ ಈ ಕೆಳಕಂಡ ಲಿಂಕ್ ಮುಖಾಂತರ ಅವಶ್ಯ ಮಾಹಿತಿಯೊಂದಿಗೆ ಹಾಜರಾಗಲು ತಿಳಿಸಿದೆ. (llink ಇ-ಮೇಲ್ ನಲ್ಲಿ ಸಹ ಕಳುಹಿಸಲಾಗಿದೆ.ವಿಶೇಷ ಸೂಚನೆ: ಸಂಬಂಧಿಸಿದ ಸಭೆಗೆ ಒಂದು ಕಛೇರಿಯಿಂದ ಒಂದೇ ಲಾಗಿನ್ ಬಳಸಿ ಹಾಜರಾಗುವುದು.