GOOD NEWS: ‘BPL ಕಾರ್ಡ್ ರದ್ದು’ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ‘APL’ಗೆ ವರ್ಗಾವಣೆ safgroupPosted on October 11, 2024 Saf news job education No Comments ರಾಜ್ಯದಲ್ಲಿ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅವರ ಕಾರ್ಡ್ ರದ್ದುಗೊಳ್ಳುವ ಆತಂಕ ಕೂಡ ಎದುರಾಗಿತ್ತು. ಆದರೇ ಇಂತವರಿಗೆ ಗುಡ್ ನ್ಯೂಸ್ ಎನ್ನುವಂತೆ ಬಿಪಿಎಲ್ ಕಾರ್ಡ್ ರದ್ದಾದರೂ, ಅವರನ್ನು ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಮಾಡುವುದಾಗಿ ಆಹಾರ ಸಚಿವ ವಿ.ಮುನಿಯಪ್ಪ ತಿಳಿಸುವ ಮೂಲಕ, ಗುಡ್ ನ್ಯೂಸ್ ನೀಡಿದ್ದಾರೆ.ಇಂದು ಕೋಲಾರದ ಕಾಂಗ್ರೆಸ್ ನಗರಾಧ್ಯಕ್ಷ ಪ್ರಸಾದ್ ಬಾಬು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅನ್ನಭಾಗ್ಯ ಯೋಜನೆಯ ಹಣ ಈವರೆಗೆ ಬಿಡುಗಡೆಯಾಗಿಲ್ಲ. ಈ ಹಣವನ್ನು ಪ್ರತಿ ತಿಂಗಳು 10ರಂದು ಬಿಡುಗಡೆ ಮಾಡಲಾಗುತ್ತಿತ್ತು. ಸರ್ವರ್ ಸಮಸ್ಯೆಯಿಂದ ಈಗ ಬಿಡುಗಡೆ ಮಾಡಲಾಗಿಲ್ಲ. ಮುಂದಿನ ವಾರ ಬಿಡುಗಡೆಯಾಗಲಿದೆ ಎಂದರು.ದಕ್ಷಿಣ ಭಾರತದಲ್ಲಿ ನಮ್ಮ ಕರ್ನಾಟಕದಲ್ಲೇ ಶೇ.80ರಷ್ಟು ಬಡತನವಿದೆ. ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ, ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಮಾಡಲಾಗುತ್ತದೆ ಎಂಬುದಾಗಿ Post Views: 1 Share with friends