Browse

Gyanvapi mosque : ಗ್ಯಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆ – ಸುಪ್ರೀಂ ಕೋರ್ಟ್‌ ಮಹತ್ವದ ನಿರ್ಣಯ!

ನವದೆಹಲಿ : ಕಾಶಿ ವಿಶ್ವನಾಥ ಹಾಗೂ ಗ್ಯಾನ ವ್ಯಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶಕ್ಕೆ ಮುಂದಾಗಿದೆ. ಗ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಸಿಕ್ಕಿದ್ದ ಕಾರಣಕ್ಕೆ ಅಲ್ಲಿ ಉತ್ಖನನ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಗ್ಯಾನವ್ಯಾಪಿ ನಿರ್ವಹಣಾ ಸಮಿತಿ ಹಾಗೂ ಭಾರತೀಯ ಪುರಾತತ್ವ ಇಲಾಖೆಗೆ ನೋಟೀಸ್‌ ನೀಡಿದೆ.

ಕಳೆದ ಬಾರಿ ಪುರಾತತ್ವ ಇಲಾಖೆಯ ವತಿಯಿಂದ ಮಸೀದಿಯ ವಜುಖಾನಾದಲ್ಲಿ ವಿಡಿಯೋಗ್ರಾಫಿಕ್‌ ಸಮೀಕ್ಷೆ ನಡೆಸಲಾಗಿತ್ತು.

ಆಗ ವಜೂಖಾನದಲ್ಲಿ ಶಿವಲಿಂಗ ಪತ್ತೆಯಾಗಿತ್ತು.ಕೂಡಲೇ ಸಮೀಕ್ಷೆಗೆ ತಡೆಯಾಜ್ಞೆ ತರಲಾಗಿತ್ತು. ಬಳಿಕ ಮಸೀದಿಯ ಕೆಲವು ಭಾಗಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಲ್ಲದೇ , ಕೋಣೆಗಳಿಗೆ ಬೀಗ ಹಾಕಲಾಗಿತ್ತು. ಆಗಿನಿಂದಲೂ ಗ್ಯಾನವಾಪಿ ಮಸೀದಿಯ ಸಂಪೂರ್ಣ ಸಮೀಕ್ಷೆ ನಡೆಯಬೇಕೆಂಬುದು ಹಿಂದೂಪರ ಸಂಘಟನೆಗಳ ಒತ್ತಾಯವಾಗಿದೆ.

Share with friends