ಅದರಲ್ಲೂ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan ) ಶತಕ ಸಿಡಿಸಿ ಮಿಂಚಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ತಮ್ಮದಾಗಿಸಿಕೊಂಡಿದ್ದಾರೆ. ನಿರ್ಣಾಯಕ ಘಟ್ಟದಲ್ಲಿ ಸೂಪರ್ ಬ್ಯಾಟಿಂಗ್ ಮೂಲಕ ವೀರೋಚಿತ ಶತಕ ಸಿಡಿಸಿದ ಸರ್ಫರಾಜ್ ಖಾನ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ ಎಂದು ಹೇಳಬಹುದು.
ಟೀಮ್ ಸೌಥಿ ಎಸೆದ 57ನೇ ಓವರ್ ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿ ಸರ್ಫರಾಜ್ ಖಾನ್ ಶತಕ ಪೂರೈಸಿದರು. ಶತಕ ಪೂರೈಸಿದ ತಕ್ಷಣ ಸರ್ಫರಾಜ್ ಖಾನ್ ಜೋರಾಗಿ ಕೂಗಿ ಗಾಳಿಗೆ ಪಂಚ್ ಹೊಡೆದು ಸಂಭ್ರಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಎಲ್ಲಾ ಆಟಗಾರರು ಸರ್ಫರಾಜ್ ಖಾನ್‌ಗೆ ಆಟಕ್ಕೆ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ಮುಖದಲ್ಲಿ ನಗು ಕೂಡ ಮೂಡಿತ್ತು.
ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮುಗುಳ್ನಗೆ ಬೀರಿದ ಮೊದಲ ಸಂದರ್ಭ ಎನಿಸಿಕೊಂಡಿದ್ದು, ಪಂದ್ಯದ ಆರಂಭದಿಂದಲೂ ಭಾರತ ತಂಡದ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ರೋಹಿತ್ ಶರ್ಮಾ, ಸರ್ಫರಾಜ್ ಖಾನ್ ಅವರ ಶತಕದೊಂದಿಗೆ ನಗೆಗಡಲಲ್ಲಿ ತೇಲಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.