IND vs NZ: 46 ರನ್ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಮೇಲೆ ಮೀಮ್ಸ್ಗಳ ಸುರಿಮಳೆ; ನೀವು ನೋಡಿ ನಕ್ಕುಬಿಡಿ safgroupPosted on October 17, 2024 Saf news job education No Comments IND vs NZ: ಟೀಂ ಇಂಡಿಯಾದ ಈ ಕಳಪೆ ದಾಖಲೆ ಒಂದೆಡೆ ನೆಟ್ಟಿಗರಿಗೆ ಭರ್ಜರಿ ಆಹಾರವಾಗಿದ್ದರೆ, ಇನ್ನೊಂದೆಡೆ ತಂಡದ ಮಾಜಿ ಆಟಗಾರರು ಕೂಡ ತಂಡದ ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಆಟಗಾರರ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೊದಲ ದಿನ ಟಾಸ್ ಕೂಡ ನಡೆಯಲಿಲ್ಲ. ಆದರೆ ಮರುದಿನವೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ ವೇಗಿಗಳ ದಾಳಿಗೆ ಸಿಲುಕಿ ಅಕ್ಷರಶಃ ತತ್ತರಿಸಿ ಹೋಗಿದೆ. ಕಿವೀಸ್ ವೇಗಿಗಳ ಎದುರು ರನ್ ಕಲೆಹಾಕಲು ಪರದಾಡಿದ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತರಹೆವಾರಿ ಮೀಮ್ಸ್ಗಳನ್ನು ಹರಿಬಿಡುವ ಮೂಲಕ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ಅಸಮಾಧಾನ ಹೊರಹಾಕಿದ್ದಾರೆ ಕಾಲೆಳೆದ ವಾಸಿಂ ಜಾಫರ್ಟೀಂ ಇಂಡಿಯಾದ ಈ ಕಳಪೆ ದಾಖಲೆ ಒಂದೆಡೆ ನೆಟ್ಟಿಗರಿಗೆ ಭರ್ಜರಿ ಆಹಾರವಾಗಿದ್ದರೆ, ಇನ್ನೊಂದೆಡೆ ತಂಡದ ಮಾಜಿ ಆಟಗಾರರು ಕೂಡ ತಂಡದ ಕಾಲೆಳೆದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಆಟಗಾರರ ಪ್ರದರ್ಶನವನ್ನು ಗೇಲಿ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಕೂಡ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಟೀಂ ಇಂಡಿಯಾದ ಈ ಕಳಪೆ ಪ್ರದರ್ಶನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದಿಷ್ಟು ಮೀಮ್ಸ್ಗಳು ಇಲ್ಲಿವೆ. Post Views: 2 Share with friends