ಹೆನ್ರಿಕ್ ಕ್ಲಾಸೆನ್ 2023 ರಿಂದ ಸನ್ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಕ್ಲಾಸೆನ್ ಅವರನ್ನು ಎಸ್ಆರ್ಹೆಚ್ ಫ್ರಾಂಚೈಸಿ 5.25 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿತ್ತು. ಇದೀಗ ಮೆಗಾ ಹರಾಜಿಗೂ ಮುನ್ನ ಕ್ಲಾಸೆನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್ ಅವರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ಅದು ಕೂಡ ಬರೋಬ್ಬರಿ 23 ಕೋಟಿ ರೂ. ನೀಡುವ ಮೂಲಕ ಎಂಬುದೇ ಅಚ್ಚರಿ.ಸೌತ್ ಆಫ್ರಿಕಾದ ಟಿ20 ಸ್ಪೆಷಲಿಸ್ಟ್ ಕ್ಲಾಸೆನ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು SRH ಫ್ರಾಂಚೈಸಿ ನಿರ್ಧರಿಸಿದೆ. ಈ ರಿಟೈನ್ ನೊಂದಿಗೆ ಹೆನ್ರಿಕ್ ಕ್ಲಾಸೆನ್ಗೆ ಸನ್ ರೈಸರ್ಸ್ ಫ್ರಾಂಚೈಸಿ 23 ಕೋಟಿ ರೂ. ನೀಡಲಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ ಹೊಡಿಬಡಿ ದಾಂಡಿಗ ಹೆನ್ರಿಕ್ ಕ್ಲಾಸೆನ್ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಐಪಿಎಲ್ 2025 ರಲ್ಲೂ ಸೌತ್ ಆಫ್ರಿಕಾ ಬ್ಯಾಟರ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲೇ ಮುಂದುವರೆಯಲಿದ್ದಾರೆ.ಕಳೆದ ಸೀಸನ್‌ನಲ್ಲಿ SRH ತಂಡವು ಫೈನಲ್‌ಗೆ ಪ್ರವೇಶಿಸುವಲ್ಲಿ ಹೆನ್ರಿಕ್ ಕ್ಲಾಸೆನ್ ಪ್ರಮುಖ ಪಾತ್ರವಹಿಸಿದ್ದರು. 16 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕ್ಲಾಸೆನ್ 280 ಎಸೆತಗಳಲ್ಲಿ ಒಟ್ಟು 479 ರನ್ ಚಚ್ಚಿದ್ದರು. ಈ ವೇಳೆ ಅವರ ಬ್ಯಾಟ್ ನಿಂದ ಸಿಡಿದ ಸಿಕ್ಸ್ಗಳ ಸಂಖ್ಯೆ ಬರೋಬ್ಬರಿ 38.ಇನ್ನು ಐಪಿಎಲ್ 2023 ರಲ್ಲೂ ಎಸ್ಆರ್ಹೆಚ್ ಪರ ಕಣಕ್ಕಿಳಿದಿದ್ದ ಕ್ಲಾಸೆನ್ 253 ಎಸೆತಗಳಲ್ಲಿ 448 ರನ್ ಬಾರಿಸಿದ್ದರು. ಬ್ಯಾಕ್ ಟು ಬ್ಯಾಕ್ ಎರಡು ಸೀಸನ್‌ಗಳಲ್ಲಿ 400+ ರನ್ ಕಲೆಹಾಕಿ ಅಬ್ಬರಿಸಿರುವ ಹೆನ್ರಿಕ್ ಅವರನ್ನು ಇದೀಗ ಮೊದಲ ರಿಟೈನ್ ಆಗಿ ಉಳಿಸಿಕೊಳ್ಳಲು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿರ್ಧರಿಸಿದೆ.ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ತಂಡ: ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಮಾರ್ಕೊ ಯಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಕ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ. ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಝಲ್ಹಕ್ ಫಾರೂಕಿ, ಶಹಬಾಝ್ ಅಹ್ಮದ್, ಟ್ರಾವಿಸ್ ಹೆಡ್, ವನಿಂದು ಹಸರಂಗ, ಪ್ಯಾಟ್ ಕಮ್ಮಿನ್ಸ್, ಜಯದೇವ್ ಉನಾದ್ಕತ್, ಆಕಾಶ್ ಸಿಂಗ್, ಜಾತವೇಧ್ ಸುಬ್ರಮಣ್ಯನ್.