KEA: ಗ್ರಾಮ ಆಡಳಿತಾಧಿಕಾರಿ ಹುದ್ದೆ- ಭಾನುವಾರ ಪರೀಕ್ಷೆ- 4.8 ಲಕ್ಷ ಅಭ್ಯರ್ಥಿಗಳು

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆ ಅ.27ರಂದು ರಾಜ್ಯದ 1,173 ಕೇಂದ್ರಗಳಲ್ಲಿ ನಡೆಯಲಿದೆ.

ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 4.8 ಲಕ್ಷ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದಾರೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲ ಕೇಂದ್ರಗಳಲ್ಲೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಒಎಂಆರ್ ನೋಂದಣಿ ಎಚ್ಚರಸೆ.26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಒಎಂಆರ್ ಶೀಟ್‌ನಲ್ಲಿ ನೋಂದಣಿ ಸಂಖ್ಯೆ‌ ಮತ್ತು ವರ್ಶನ್‌ಕೋಡ್‌ ನಮೂದಿಸುವಾಗ ಸುಮಾರು ಒಂಬತ್ತು ಸಾವಿರ ಅಭ್ಯರ್ಥಿಗಳು ತಪ್ಪು ಮಾಡಿದ್ದರು. ಅಂತಹ ಪ್ರಮಾದಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಮಾದರಿ ಒಎಂಆರ್‌ ಶೀಟ್‌ಗಳನ್ನು ಬಳಸಿಕೊಂಡು ಅಭ್ಯಾಸ ಮಾಡಬೇಕು. ತಪ್ಪುಗಳಿಗೆ ಪ್ರಾಧಿಕಾರ ಜವಾಬ್ದಾರಿಯಾಗದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಹೇಳಿದ್ದಾರೆ.

ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ್ದ 63 ಸಾವಿರ ಅಭ್ಯರ್ಥಿಗಳಿಗೆ ಅ.26ರಂದು ಕನ್ನಡ ಕಡ್ಡಾಯ ಪರೀಕ್ಷೆ ನಡೆಸಲಾಗುತ್ತಿದೆ. ಅವರಲ್ಲಿ ಜಿಟಿಟಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2,300 ಅಭ್ಯರ್ಥಿಗಳೂ ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Share with friends

Related Post

Leave a Reply

Your email address will not be published.