Koppal: ದಲಿತರ ಮೇಲೆ ದೌರ್ಜನ್ಯ ಪ್ರಕರಣ; ಒಂದೇ ಗ್ರಾಮದ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ! ಸುದ್ದಿ ತಿಳಿಯುತ್ತಿದಂತೆ ಓರ್ವ ಸಾವು!

ದಲಿತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ (Assault Case) ಸಂಬಂಧಿಸಿದಂತೆ ಬರೋಬ್ಬರಿ‌ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕೊಪ್ಪಳ ಜಿಲ್ಲೆಯ (Koppala) ಗಂಗಾವತಿ ತಾಲೂಕಿನ (Gangavathi) ಮರಕುಂಬಿ ಗ್ರಾಮದ ನಿವಾಸಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ನೀಡಿ ಆದೇಶ ನೀಡಿದೆ.

2014ರ ಆಗಸ್ಟ್ 28 ರಂದು ಘಟನೆ ನಡೆದಿತ್ತು. ಮಂಜುನಾಥ್ ಎನ್ನುವವರಿಗೆ ನಾಲ್ವರು ಯುವಕರು ಹಲ್ಲೆ ಮಾಡಿದ್ದರು. ಥಿಯೇಟರ್ನಿಂದ (Cinema Theatre) ಊರಿಗೆ ತೆರಳಿದ್ದ ಮಂಜುನಾಥ್ ಊರಿವರಿಗೆ ವಿಷಯ ಮುಟ್ಟಿಸಿದ್ದರು. ಮಂಜುನಾಥ್ ಪರವಾಗಿ ಊರ ಜನರು ಅನೇಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಈ ಕುರಿತು ಭೀಮೇಶ್ ನೀಡಿದ ದೂರಿನನ್ವಯ ಶಿಕ್ಷೆ ಪ್ರಕಟಿಸಲಾಗಿದೆ.

ಏನಿದು ಪ್ರಕರಣ?2014 ರ ಆಗಸ್ಟ್ ನಲ್ಲಿ ಕೊಪ್ಪಳದ ಮರಕುಂಬಿಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂರೆ ಬರೋಬ್ಬರಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 101 ಅಪರಾಧಿಗಳ ಪೈಕಿ ಮೂವರಿಗೆ 5 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ತೀರ್ಪು ನೀಡುತ್ತಿದ್ದಂತಯೇ ನ್ಯಾಯಾಲಯದ ಮುಂದೆ ಅಪರಾಧಿಗಳ ಕುಟುಂಬಸ್ಥರು ಕಣ್ಣೀರು ಹಾಕಿ, ನ್ಯಾಯ ಕೊಡಿಸ್ತೀವಿ ಎಂದು ಅಮಾಯಕರಿಗೆ ಕೋರ್ಟ್ ಶಿಕ್ಷೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೇ, ಕೆಲ ಜನ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಅಮಾಯಕರಾದವರಿಗೆ ಶಿಕ್ಷೆ ಯಾಕೆ ಎಂದು ಶಿಕ್ಷೆ ಪ್ರಕಟವಾಗುತ್ತಿದ್ದಂತಯೇ ಅಪರಾಧಿಗಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಜೈಲಿಗೆ ಕರೆದೊಯ್ಯುವಾಗ ಗಳಗಳನೆ ಕಣ್ಣೀರು ಹಾಕಿ, ನಾವು ತಪ್ಪೇ ಮಾಡಿಲ್ಲ ಎಂದು ಗೋಳಾಡಿದ್ದಾರೆ. ಕೊಪ್ಪಳ ಜಿಲ್ಲಾ ನ್ಯಾಯಾಲಯದ ಆವರಣ ಸಿನಿಮೀಯ ರೀತಿಯಲ್ಲಿ ಘಟನೆಗೆ ಸಾಕ್ಷಿಯಾಗಿತ್ತು.

ಇನ್ನು, ಕೋರ್ಟ್ ತೀರ್ಪು ಬರುತ್ತಿದ್ದಂತೆ ಮರಕುಂಬಿಯ ದಲಿತರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 30 ರಾಮಣ್ಣ ಬೋವಿ ಮೃತ ವ್ಯಕ್ತಿಯಾಗಿದ್ದು, ಅಪರಾಧಿಗೆ ಐದು ವರ್ಷ ಶಿಕ್ಷೆಯಾಗಿತ್ತಂತೆ. ನಿನ್ನೆ ತೀರ್ಪಿನ ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಮಣ್ಣ ಇಂದು ಬೆಳಗ್ಗೆ ಮೃತನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. (ವರದಿ: ಶರಣಪ್ಪ ಬಾಚಲಾಪುರ, ನ್ಯೂಸ್18 ಕನ್ನಡ, ಕೊಪ್ಪಳ)ಮನೆಯಿಂದ ಇಬ್ಬರು ಮಕ್ಕಳ ಕಿಡ್ನ್ಯಾಪ್!ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹಾಡಹಗಲೇ ಇಬ್ಬರು ಮಕ್ಕಳನ್ನ ಕಿಡ್ನಾಪ್ ಮಾಡಲಾಗಿದೆ. ಸ್ವಾಮಿ ಪ್ಲಾಟ್ ವಿಜಯ ದೇಸಾಯಿ ದಂಪತಿಗಳ ಮನೆಯಲ್ಲಿ ಅಜ್ಜಿ ಹಾಗೂ ಇಬ್ಬರು ಮಕ್ಕಳಿದ್ದರು. ಕಾರಿನಲ್ಲಿ ಬಂದ ದುಷ್ಕರ್ಮಿಗಳು 4 ವರ್ಷದ ಸ್ವಸ್ತಿ ಹಾಗೂ 3 ವರ್ಷದ ವಿಯೋ ಅನ್ನೋರನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ. ಮೂರು ತಂಡಗಳನ್ನ ರಚಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಕಾರಿನ ಬಾನೆಟ್ ಮೇಲೆ ಸಂಚಾರಿ ಪೊಲೀಸ್!ಟ್ರಾಫಿಕ್ ಪೊಲೀಸ್ನ ಕಾರಿನ ಬಾನೆಟ್ ಮೇಲೆಯೇ ಚಾಲಕನೊಬ್ಬ ಎಳೆದೊಯ್ದ ಘಟನೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ನಡೆದಿದೆ. ವಾಹನ ತಪಾಸಣೆ ಮಾಡಲು ಭದ್ರಾವತಿ ಕಡೆಯಿಂದ ಬಂದ ಕಾರೊಂದನ್ನ ಟ್ರಾಫಿಕ್ ಪೊಲೀಸ್ ತಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸದೇ ಚಾಲಕ ಟ್ರಾಫಿಕ್ ಪೊಲೀಸ್ಗೆ ಗುದ್ದಿದ್ದಾನೆ. ಈ ವೇಳೆ ಬ್ಯಾನೆಟ್ ಮೇಲೆ ಬಿದ್ದ ಟ್ರಾಫಿಕ್ ಪೊಲೀಸ್ನ 100 ಮೀಟರ್ ದೂರದವರೆಗೂ ಎಳೆದೊಯ್ದಿದ್ದಾನೆ.ಅದೃಷ್ಟಕ್ಕೆ ಟ್ರಾಫಿಕ್ ಪೊಲೀಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಯ ದೃಶ್ಯವನ್ನ ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ.. ಈತನ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಾಗಿದೆ.

Share with friends

Related Post

Leave a Reply

Your email address will not be published.