ಇತ್ತ ಬಿಜೆಪಿ ಕೂಡ ರಣತಂತ್ರ ಹೂಡಿದ್ದು, ಪ್ರಿಯಾಂಕಾ ಗಾಂಧಿಗೆ ಮೊದಲ ಬಾರಿಗೇ ಸೋಲಿನ ರುಚಿ ಉಣ್ಣಿಸಲು ಬಿಗ್ ಪ್ಲಾನ್ ಅನ್ನೇ ಮಾಡಿದೆ. ಈ ಹಿಂದೆ ಅಮೇಥಿಯಿಂದ (Amethi) ರಾಹುಲ್ ಗಾಂಧಿ (Rahul Gandhi) ಸ್ಪರ್ಧಿಸಿದ್ದಾಗ, ಸ್ಮೃತಿ ಇರಾನಿಯವರನ್ನು ಬಿಜೆಪಿ ಕಣಕ್ಕಿಳಿಸಿ, ಕಾಂಗ್ರೆಸ್ ನಾಯಕನಿಗೆ ಸೋಲುಣ್ಣಿಸಿತ್ತು. ಇದೀಗ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿಗೂ ವಯನಾಡಿನಿಂದ ಸೋಲುಣಿಸಲು ಬಿಜೆಪಿ (BJP) ಪ್ಲಾನ್ ಮಾಡಿದೆ. ಅದಕ್ಕಾಗಿ ಖ್ಯಾತ ಬಹುಭಾಷಾ ನಟಿ ಖುಷ್ಬೂ (Khushboo) ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಿಯಾಂಕಾ ಗಾಂಧಿ ವಿರುದ್ಧ ಖುಷ್ಬೂ ಸ್ಪರ್ಧೆವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬು ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯೋಜನೆ ಇದೆ. ಅಭ್ಯರ್ಥಿ ಆಯ್ಕೆಯ ಅಂತಿಮ ಪಟ್ಟಿಯಲ್ಲಿ ಖುಷ್ಬು ಹೆಸರು ಸೇರ್ಪಡೆಯಾಗಿದೆ ಎಂದು ವರದಿಯಾಗಿದೆ. ಖುಷ್ಬು ಅವರನ್ನು ಅಭ್ಯರ್ಥಿ ಮಾಡುವ ಬಗ್ಗೆ ಕೇಂದ್ರ ನಾಯಕತ್ವ ರಾಜ್ಯ ಘಟಕದ ಅಭಿಪ್ರಾಯ ಕೇಳಿದೆ.ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಖುಷ್ಬೂ
ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಬರಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಖುಷ್ಬೂ ಬಿಜೆಪಿ ಸೇರಿದ್ದರು. ಪ್ರಸ್ತುತ, ಖುಷ್ಬು ಬಿಜೆಪಿ ತಮಿಳುನಾಡು ಘಟಕದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೇ ಆದರೆ ನಟಿ ಖುಷ್ಬೂ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ವಯನಾಡಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡುಕೇರಳ ರಾಜ್ಯ ಘಟಕದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವಯನಾಡ್‌ಗೆ ಎಂಟಿ ರಮೇಶ್, ಶೋಭಾ ಸುರೇಂದ್ರನ್, ಎಪಿ ಅಬ್ದುಲ್ಲಕುಟ್ಟಿ ಮತ್ತು ಶಾನ್ ಜಾರ್ಜ್ ಹೆಸರನ್ನು ಬಿಜೆಪಿ ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷಈ ಹಿಂದೆ 202ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ವಯನಾಡು ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2019 ರಲ್ಲಿ, ತುಷಾರ್ ವೆಲ್ಲಪ್ಪಲ್ಲಿ ಅವರು ಬಿಡಿಜೆಎಸ್‌ನಿಂದ ಸ್ಪರ್ಧಿಸಿದ್ದರು. ಕೆ ಸುರೇಂದ್ರನ್ ಕ್ಷೇತ್ರದಿಂದ 1,41,045 ಮತಗಳು ಬಂದಿವೆ. 2019ರಲ್ಲಿ ಎನ್‌ಡಿಎ ಇಲ್ಲಿಂದ ಕೇವಲ 78,816 ಮತಗಳನ್ನು ಪಡೆದಿತ್ತು.ವಯನಾಡ್ ಲೋಕಸಭಾ ಕ್ಷೇತ್ರವು ವಯನಾಡ್ ಜಿಲ್ಲೆಯ ಮನಂತವಾಡಿ, ಸುಲ್ತಾನ್ ಬತೇರಿ ಮತ್ತು ಕಲ್ಪಟ್ಟಾ ಕ್ಷೇತ್ರಗಳು, ಮಲಪ್ಪುರಂ ಜಿಲ್ಲೆಯ ಎರನಾಡ್, ನಿಲಂಬೂರ್ ಮತ್ತು ವಂತೂರ್ ಕ್ಷೇತ್ರಗಳು ಮತ್ತು ಕೋಝಿಕೋಡ್ ಜಿಲ್ಲೆಯ ತಿರುವಂಬಾಡಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.