ಮಳೆ.. ಎಲ್ಲೆಲ್ಲೂ ಮತ್ತೆ ಮಳೆ ಶುರುವಾಗಿದೆ. ಇನ್ನೇನು ಮುಂಗಾರು ಮಳೆ ಅಬ್ಬರ ಮುಕ್ತಾಯ ಆಯ್ತು, ಮತ್ತೆ ಮಳೆ ಬರಲ್ಲ ಬಿಡು ಅಂತಾ ಅಂದುಕೊಳ್ಳುವ ಸಮಯದಲ್ಲೇ, ಇದೀಗ ಮತ್ತೆ ಹಿಂಗಾರು ಮಳೆ ತನ್ನ ಅಸಲಿ ಮುಖ ತೋರಿಸುತ್ತಿದೆ. ಈ ಮೂಲಕ ಸದ್ಯಕ್ಕೆ ಮಳೆರಾಯ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು, ಜನರು ಕೂಡ ಬೆಚ್ಚಿಬಿದ್ದಿದ್ದಾರೆ.ಅಲ್ಲದೆ ಇನ್ನೂ 48 ಗಂಟೆ ಕಾಲ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಬರಲಿದೆಯಂತೆ. ಹಾಗಾದ್ರೆ ಈ ರೀತಿ ಭಾರಿ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು?ಕಳೆದ ಕೆಲ ದಿನಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿಯಾಗಿ ಹಿಂಗಾರು ಮಳೆಯ ಆಗಮನ ಆಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಫುಲ್ ಅಲರ್ಟ್ ಆಗಿರುವ ಮಳೆರಾಯ ಇದೀಗ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲೂ ಮುಂದಿನ ಹಲವಾರು ದಿನಗಳ ಕಾಲ ಅಬ್ಬರಿಸುವ ಮುನ್ಸೂಚನೆ ನೀಡುತ್ತಿದ್ದಾನೆ. ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಅಸಲಿ