ದಿವಂಗತ ರತನ್ ಟಾಟಾ ಅವರು ಬಿಟ್ಟುಹೋದ ಆಸ್ತಿಮೌಲ್ಯ ಸುಮಾರು 10,000 ಕೋಟಿ ರೂಪಾಯಿಗಳನ್ನು ತಮ್ಮ ಹೆಸರಿನ ಚಾರಿಟಬಲ್ ಫೌಂಡೇಶನ್‌ಗೆ ಬಿಟ್ಟುಹೋಗಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಬಹುತೇಕ ಸಂಪತ್ತು ಅವರ ಒಡಹುಟ್ಟಿದವರಿಗೆ, ಅವರ ಅಡುಗೆಯವರು ಮತ್ತು ಅಡುಗೆ ಮುಖ್ಯಸ್ಥರಿಗೆ ಹೋಗಿದ್ದು, ಅಷ್ಟೇ ಅಲ್ಲ ತಮ್ಮ ಪ್ರೀತಿಯ ನಾಯಿ ಜರ್ಮನ್ ಶೆಫರ್ಡ್ ಟಿಟೊ ಹೆಸರಿನಲ್ಲಿ ರತನ್ ಟಾಟಾ ಸಂಪತ್ತನ್ನು ಬರೆದಿಟ್ಟಿದ್ದಾರೆ.
ಆರು ವರ್ಷಗಳ ಹಿಂದೆ ಟಾಟಾ ಅವರು ದತ್ತು ಪಡೆದ ಟಿಟೊ ಎಂಬ ಪ್ರೀತಿಯ ನಾಯಿಯನ್ನು ಅವರ ದೀರ್ಘಕಾಲದ ಅಡುಗೆ ಭಟ್ಟ ರಾಜನ್ ಶಾ ನೋಡಿಕೊಳ್ಳಲಿದ್ದಾರೆ. ರತನ್ ಟಾಟಾ ಜೊತೆಗೆ ಅವರ ಸಾವಿನವರೆಗೂ ಇದ್ದ ಅವರ ದತ್ತುಪುತ್ರನಂತೆ ಇದ್ದ ಸಹಾಯಕ ಶಂತನು ನಾಯ್ಡುನ ಉನ್ನತ ಶಿಕ್ಷಣದ ಸಾಲವನ್ನು ಮನ್ನಾ ಮಾಡಲಾಗಿದೆ.ರತನ್ ಟಾಟಾ ಸಂಪತ್ತು: ಮೂಲತಃ ಕೈಗಾರಿಕೋದ್ಯಮಿ ಹಾಗೂ ಸಮಾಜೋಪಕಾರಿಯಾಗಿರುವ ರತನ್ ಟಾಟಾ ಅವರ ಆಸ್ತಿಮೌಲ್ಯ ಸುಮಾರು 10,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಅದರಲ್ಲಿ 0.83ರಷ್ಟು ಅಂದರೆ ಸುಮಾರು 8 ಸಾವಿರ ಕೋಟಿ ರೂಪಾಯಿಗಳಷ್ಟು ಟಾಟಾ ಸನ್ಸ್ ನಲ್ಲಿದ್ದು, ಸುಮಾರು 165 ಬಿಲಿಯನ್ ಡಾಲರ್ ಉಪ್ಪು-ಸಾಫ್ಟ್‌ವೇರ್ ಸಮೂಹದ ಮೂಲವಾಗಿದೆ.