ಈ ವಿಚಾರಣೆಯ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಅವರು ಕಣ್ಣೀರು (Tears) ಸುರಿಸಿರುವ ಘಟನೆ ಕೂಡ ನಡೆದಿದೆ.ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ82ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಶಾಸಕ ಸತೀಶ್ ಸೈಲ್ ಸೇರಿ ಆರೋಪಿಗಳ ಪರವಾಗಿ ಅವರಿಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಿಸುವ ಕುರಿತು ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿದರು. ವಾದದ ಸಂದರ್ಭದಲ್ಲಿ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್ ಅವರು, ಶಾಸಕ ಸತೀಶ್ ಸೈಲ್ ಅವರಿಗೆ ಅನಾರೋಗ್ಯದ ಸಮಸ್ಸೆಗಳಿವೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಲ್ ಸಹ ಇದೇ ಆಧಾರದ ಮೇಲೆ ಪಡೆದಿದ್ದರು. ವೈದ್ಯಕೀಯ ದಾಖಲೆಗಳನ್ನ ಸಲ್ಲಿಕೆ ಮಾಡಲಾಗಿದೆ.
ಪ್ರಕರಣದಲ್ಲಿ ವೈಯಕ್ತಿಕವಾಗಿ ಸತೀಶ್ ಸೈಲ್ ಪಾತ್ರ ಏನು ಇಲ್ಲ. ಅದು ಕಂಪನಿಯ ಮೂಲಕ ಟ್ರಾನ್ಸ್ಪೋರ್ಟ್ ಆಗಿದೆ. ಕಳ್ಳತನದಲ್ಲಿ ಆರೋಪಿಗಳದ್ದು ಎಷ್ಟು ಪಾತ್ರ ಇದೆ ಎಂಬುದನ್ನು ಸಿಬಿಐ ಸ್ಪಷ್ಟಪಡಿಸಿಲ್ಲ ಎಂದು ವಾದ ಮಂಡಿಸಿದರು.ಕಣ್ಣೀರು ಸುರಿಸಿದ ಶಾಸಕ ಸತೀಶ್ ಸೈಲ್ಇದಾದ ಬಳಿಕ ನ್ಯಾಯಾಧೀಶರು ಶಾಸಕ ಸೈಲ್ ಅವರಿಗೆ ನೀವೇನಾದ್ರು ಹೇಳೋದಿದ್ಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಾಸಕ ಸೈಲ್ ಕಣ್ಣಿನಲ್ಲಿ ನೀರು ತುಂಬಿಕೊಂಡು ನನಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ, ಒಬ್ಬಳು ಬೆಂಗಳೂರು, ಇನ್ನೊಬ್ಬಳು ವಿಜಯನಗರದಲ್ಲಿ ಇದ್ದಾಳೆ. ಪತ್ನಿಗೆ ಒತ್ತಡದ ಖಾಯಿಲೆಯಿಂದ ಬಳಲ್ತಿದ್ದಾಳೆ. ನಾನು ಕೂಡ ಕ್ರೋನಿಕಲ್ ಸಮಸ್ಯೆಯಿಂದ ಬಳಲ್ತಿದ್ದೇನೆ ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲು ಮನವಿಇತ್ತ ಸಿಬಿಐ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ, ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸುವಂತೆ ಆಗ್ರಹಿಸಿದರು. ಅಪರಾಧಿಗಳು 3100ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆ ಮಾಡಿದ್ದಾರೆ. ಹೀಗಾಗಿ ಆರೋಪಿಗಳಿಗೆ ಗರಿಷ್ಠ ದಂಡ ವಿಧಿಸುವಂತೆ ಮನವಿ ಮಾಡಿದ್ದಾರೆ.ಜಡ್ಜ್ ಮುಂದೆ ಸಮಸ್ಯೆ ಹೇಳಿಕೊಂಡ ಆರೋಪಿಗಳುಜಡ್ಜ್ ಮುಂದೆ ಎಲ್ಲಾ ಅಪರಾಧಿಗಳು ಕೂಡ ಕುಟುಂಬದ ಸಮಸ್ಯೆಗಳು ಹಾಗೂ ಅನಾರೋಗ್ಯದ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅನಾರೋಗ್ಯದ ಸಮಸ್ಯೆ ಇದೆ, ಬ್ಯಾಕ್ ಪೇನ್ ಇದೆ, ಬಿಪಿಶುಗರ್ ಇದೆ. ಮಕ್ಕಳು ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ, ಕುಟುಂಬದ ನಿರ್ವಹಣೆ ನಮ್ಮಿಂದಲೇ ಆಗ್ತಾ ಇರೋದು. ಅನಾರೋಗ್ಯಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ ಹೀಗಾಗಿ ಕಡಿಮೆ ಶಿಕ್ಷೆ ಪ್ರಮಾಣ ನೀಡುವಂತೆ ನ್ಯಾಯಾಧೀಶರಿಗೆ ಒಬ್ಬೊಬ್ಬರಾಗಿಯೇ ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ.
ಅಕ್ಟೋಬರ್ 26 ರಂದು ಶಿಕ್ಷೆ ಪ್ರಮಾಣ ಪ್ರಕಟಇನ್ನೂ ಪರ ವಿರೋಧ ವಾದ ಆಲಿಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ನಾಳೆ (ಅಕ್ಟೋಬರ್ 26ರಂದು) ಶಿಕ್ಷೆಯ ಪ್ರಮಾಣ ಘೋಷಣೆಯನ್ನ ಮುಂದೂಡಿದ್ದಾರೆ. ನಾಳೆ ಶಾಸಕ ಸತೀಶ್ ಸೈಲ್ ಸೇರಿ ಎಲ್ಲ ಏಳು ಅಪರಾಧಿಗಳಿಗೂ ಶಿಕ್ಷೆಯ ಪ್ರಮಾಣ ಪ್ರಕಟ ಮಾಡಲಿದ್ದಾರೆ.(ವರದಿ: ಮಂಜುನಾಥ್, ನ್ಯೂಸ್18 ಕನ್ನಡ)