ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು ಆದರೆ ಇದೀಗ ಖಾದ್ರಿ ಉಲ್ಟಾ ಹೊಡೆದಿದ್ದಾರೆ.ಸಿಎಂ ಮಾತಿಗೆ ಒಪ್ಪಿದ್ದ ಖಾದ್ರಿ!ಸಿಎಂ ಭೇಟಿ ವೇಳೆ ನಾಮಪತ್ರ ವಾಪಸ್ ಪಡೆಯುವಂತೆ ಖಾದ್ರಿಗೆ ಸಿದ್ದರಾಮಯ್ಯ ಸೂಚಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಮಾತಿಗೆ ಒಪ್ಪಿ ಬಂದು ಆ ನಂತರ ಉಲ್ಟಾ ಹೊಡೆದಿದ್ದಾರೆ. ಪಠಾಣ್ ರನ್ನ ಕಣದಿಂದ ಹಿಂದೆ ಸರಿಸಿ ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು ಆದರೆ, ಖಾದ್ರಿ ಮಾತಿಗೆ ಒಪ್ಪದ ಸಿಎಂ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಹಾಗಾಗಿ ಸಿಎಂ ಮಾತಿಗೆ ಒಪ್ಪಿಗೆ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿ ಅಲ್ಲಿಂದ ಹೊರ ಬಂದಿದ್ದರು.
ಸಿಎಂ ಭೇಟಿ ವೇಳೆ ನಾಮಪತ್ರ ವಾಪಸ್ ಪಡೆಯುವಂತೆ ಖಾದ್ರಿಗೆ ಸಿದ್ದರಾಮಯ್ಯ ಸೂಚಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಮಾತಿಗೆ ಒಪ್ಪಿ ಬಂದು ಆ ನಂತರ ಉಲ್ಟಾ ಹೊಡೆದಿದ್ದಾರೆ. ಪಠಾಣ್ ರನ್ನ ಕಣದಿಂದ ಹಿಂದೆ ಸರಿಸಿ ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು ಆದರೆ, ಖಾದ್ರಿ ಮಾತಿಗೆ ಒಪ್ಪದ ಸಿಎಂ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಹಾಗಾಗಿ ಸಿಎಂ ಮಾತಿಗೆ ಒಪ್ಪಿಗೆ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿ ಅಲ್ಲಿಂದ ಹೊರ ಬಂದಿದ್ದರು.ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ತೀರ್ಮಾನ; ಉಲ್ಟಾ ಹೊಡೆದ ಖಾದ್ರಿಇದೀಗ ಸಭೆಯಿಂದ ಹೊರಬಂದ ಬಳಿಕ ಖಾದ್ರಿ ಅವರು ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಒಂದು ಸಾರಿ ಆಯ್ತು ಎಂದೆ ಆ ನಂತರ ನೋಡೋಣ ಎಂದಷ್ಟೇ ಬಂದೆ, ಆಗ ಗರಂ ಆದ ಸಿದ್ದರಾಮಯ್ಯ ಅವರು ಭುಜ ತಟ್ಟಿ ನಾಮಪತ್ರ ವಾಪಸ್ ತೆಗೆದುಕೊಳ್ಳಪ್ಪ ಎಂದು ಹೇಳಿದ್ದಾರೆ. ನಾನು ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಖಾದ್ರಿ ಹೇಳಿದ್ದಾರೆ.ಬೆಂಬಲಿಗರು ಹೇಳಿದ್ದೇನು?
ಅಜ್ಜಂಪೀರ್ ಖಾದ್ರಿ ಅವರು ಸದ್ಯ ಮೊಬೈಲ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ಶಿಗ್ಗಾವಿಯಲ್ಲಿ ನಮಾತನಾಡಿರುವ ಖಾದ್ರಿ ಬೆಂಬಲಿಗರು, ನಮ್ಮ ನಾಯಕರು ನಾಮಪತ್ರ ವಾಪಸ್ ತಗೊಳೊಲ್ಲ. ಅವರು ಸ್ಪರ್ಧೆ ಮಾಡ್ತಾರೆ, ಇದೆಲ್ಲ ಪೇಕ್ ನ್ಯೂಸ್ ಎಂದು ಖಾದ್ರಿ ಬೆಂಬಲಿಗರು ಹೇಳಿದ್ದಾರೆ.ಕಾಂಗ್ರೆಸ್‌ಗೆ ಮತ್ತೆ ಬಂಡಾಯ ಭೀತಿ!ಶಿಗ್ಗಾವಿಯಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ನಿರ್ಣಾಯಕ ಪಾತ್ರವಹಿಸುವುದರಿಂದ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳು ಬಂಡಾಯ ಅಭ್ಯರ್ಥಿಯಿಂದ ಹಂಚಿಹೋದರೆ ಕಾಂಗ್ರೆಸ್ ಸೋಲು ಖಚಿತ ಎನ್ನುವಂತಾಗಿದೆ. ಹಾಗಾಗಿ ಸಚಿವ ಜಮ್ಮೀರ್ ಅಹಮದ್ ಖಾನ್ ಅವರು ಇಂದು ಕಾವೇರಿ ನಿವಾಸಕ್ಕೆ ಖಾದ್ರಿ ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಅವರು ಬಳಿ ಕರೆತಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಖಾದ್ರಿ ಅವರನ್ನು ಸಮಾಧಾನಪಡಿಸಿ ನಾಮಪತ್ರ ವಾಪಸ್ ಪಡೆಯಲು ಸೂಚನೆ ನೀಡಿದ್ದರು. ಆಗ ಸಿಎಂ ಮಾತಿಗೆ ಖಾದ್ರಿ ಅವರು ಒಪ್ಪಿಗೆ ಸೂಚಿಸಿದ್ದರು.
ಸಿಎಂ ಎದುರು ಕಣದಿಂದ ಹಿಂದೆ ಸರಿಯಲು ಒಪ್ಪಿದ್ದ ಖಾದ್ರಿಬಂಡಾಯ ಅಭ್ಯರ್ಥಿ ಖಾದ್ರಿ ಅವರನ್ನು ಮನವೊಲಿಸಲು ಮುಂದಾದ ಅಲ್ಪಸಂಖ್ಯಾತ ಸಚಿವರುಗಳಾದ ರಹೀಂ ಖಾನ್, ಜಮ್ಮೀರ್ ಅಹಮದ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರು ನಿಮ್ಮ ಜೊತೆ ನಾವು ಇದ್ದೇವೆ ಎಂದು ಖಾದ್ರಿ ಅವರಿಗೆ ಭರವಸೆ ನೀಡಿದ್ದರು. ಸಮುದಾಯದ ನಾಯಕರ ಮಾತಿನ ಬಳಿಕ ಅಂತಿಮವಾಗಿ ಸಿಎಂ ಜೊತೆ ಮಾತುಕತೆ ನಡೆಸಲಾಯಿತು. ಈ ವೇಳೆ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ರನ್ನು ಬೆಂಬಲಿಸೋದಾಗಿ ಖಾದ್ರಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿಯೂ ಖಾದ್ರಿ ತಿಳಿಸಿದ್ದಾರೆ.