Browse

SSLC exam ಎಸ್ಎಸ್ಎಲ್’ಸಿ ಪರೀಕ್ಷೆ : ಭಯ ಬೇಡ, ಆತ್ಮವಿಶ್ವಾಸವಿರಲಿ..!

sslc exam | ಎಸ್ಎಸ್ಎಲ್’ಸಿ ಪರೀಕ್ಷೆ : ಭಯ ಬೇಡ, ಆತ್ಮವಿಶ್ವಾಸವಿರಲಿ..!

ವಿಶೇಷ ಅಂಕಣ : ತಾಜುದ್ದೀನ್ ಖಾನ್, ಅಧ್ಯಕ್ಷರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶಿವಮೊಗ್ಗ ಜಿಲ್ಲೆ.

ಎಲ್ಲಿರಿಗೂ ನಮಸ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ, ಈಗಾಗಲೇ ಪೋಷಕರಿಗೆ ಆತಂಕ ಶುರುವಾಗಿದೆ, ಮನೆ ಬಾಗಿಲಿಗೆ ಬಂದು ಪರೀಕ್ಷೆ ನಿಂತಿದೆ. ಪರೀಕ್ಷೆ ಬರೆಯುತ್ತಿರುವ ಪ್ರತಿ ವಿದ್ಯಾರ್ಥಿ ಗಳ ಮನೆಗಳಲ್ಲಿಯೂ ಕೂಡ ಮಕ್ಕಳ ಜೊತೆಗೆ ಪೋಷಕರಿಗೂ ಕೂಡ ಆತಂಕ. ನನ್ನ ಮಗು ಕಳೆದ ಒಂದು ವರ್ಷದಿಂದ ಸತತ ಪ್ರಯತ್ನದಲ್ಲಿ ನಿರತವಾಗಿದೆ. ತುಂಬಾ ದಿನದಿಂದ ಪರಿಶ್ರಮ ಪಡುತ್ತಿದ್ದಾರೆ. ಪರೀಕ್ಷೆ ಹೇಗೆ ಬರೆಯುತ್ತಾರೋ? ಏನೋ? ಎಂಬ ಪ್ರಶ್ನೆ ಪೋಷಕರಲ್ಲಿ ಕಾಡುತ್ತಿದೆ.ಮಕ್ಕಳಲ್ಲಿ ಎಲ್ಲಾ ಓದಿದೀನಿ ಎಂಬ ನಂಬಿಕೆ ಇದ್ದರೂ ಕೂಡಾ, ಮರೆತೂ ಹೂಗುತ್ತದೆ ಎಂಬ ಭಯ ಮಕ್ಕಳಲ್ಲಿ ಕಾಡುತ್ತದೆ. ಹಾಗಾದರೆ ಈ ಬಾರಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಉತ್ತಮ ಫಲಿತಾಂಶಕ್ಕಾಗಿ ಏನು ಮಾಡಬಹುದು?ಪರೀಕ್ಷೆ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಎರಡು ಮೂರು ಬಾರಿ ಎಲ್ಲಾ ವಿಷಯಗಳನ್ನು ಓದಿ ಪೂರ್ಣಗೊಳಿಸಿದರೂ ಕೂಡ, ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯದ ಕೊರತೆ ಇರುವಂತಹ ಮಕ್ಕಳು ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಖಂಡಿತವಾಗಿಯೂ ಕೂಡ ಉತ್ತಮವಾದಂತಹ ಫಲಿತಾಂಶ ಪಡೆಯಲು ಸಾಧ್ಯವಾಗಬಹುದು.

1. ಪ್ಲ್ಯಾನಿಂಗ್ ಅಥವಾ ಯೋಜನೆ.ಈಗಾಗಲೇ ಎಲ್ಲಾ ವಿಷಯಗಳು ಸಂಪೂರ್ಣವಾಗಿ ಓದಿಕೊಂಡು, ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕೂಡ ಬರೆದಿದ್ದೀರಾ. ಆದರೆ ಕೆಲವೊಂದು ವಿಷಯದಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಿರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಆ ವಿಷಯದ ಕಡೆ ಹೆಚ್ಚು ಸಮಯ ನೀಡುವುದರ ಮೂಲಕ ಹಾಗೂ ಆ ವಿಷಯ ಯಾವ ರೀತಿ ಓದಬೇಕು ಎನ್ನುವ ಕ್ರಿಯ ಯೋಜನೆಯನ್ನು ಸಿದ್ಧಪಡಿಸಿಕೊಳ್ಳುವುದರ ಮೂಲಕ ಹೆಚ್ಚಿನ ಸಮಯ ಮೀಸಲಿಡುವುದು.

2. ವಿಷಯವಾರು ಸಮಯವನ್ನು ನಿಗದಿಪಡಿಸಿಕೊಳ್ಳುವುದು.

3. ಪರೀಕ್ಷೆ ಹತ್ತಿರವಾಗುತ್ತಿರುವ ಸಮಯದಲ್ಲಿ ಬಹಳ ಮುಖ್ಯವಾಗಿ ಸೆಲ್ ಫೋನ್ ಬಳಕೆ ಕಡಿಮೆಯಾಗಬೇಕು. ಅದರಲ್ಲೂ ಮುಖ್ಯವಾಗಿ ಸೋಶಿಯಲ್ ಮೀಡಿಯಾ, ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್, ರೀಲ್ಸ್ ಹಾಗೂ ಇತರೆ ಅನಗತ್ಯ ಅನಾವಶ್ಯಕ ವಿಚಾರದ ಕಡೆ ಹೆಚ್ಚು ಸಮಯ ಕಳೆಯುವುದರಿಂದ ಮನಸ್ಸು ವಿಚಲಿತಾವಾಗಬಹುದು. ಈಗಾಗಲೇ ಓದಿದಂತಹ ವಿಚಾರ ಮರೆತು ಹೋಗುವಂತಹ ಸಾಧ್ಯತೆ ಹೆಚ್ಚು ಇರುತ್ತೆ.

4. ನಿರಂತರವಾದ ಅಧ್ಯಯನದಿಂದ ಮನಸ್ಸಿನ ಮೇಲೆ ಒತ್ತಡ ಬರಬಹುದು. ಇದರಿಂದ ಮನಸ್ಸಿನ ಏಕಾಗ್ರತೆಗಾಗಿ ಪ್ರತಿದಿನ ನಿಯಮಿತವಾಗಿ ಧ್ಯಾನ ಮಾಡಬೇಕು. ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಿ ಓದಿದಂತಹ ವಿಚಾರ ಮನಸ್ಸಿನಲ್ಲಿ ಉಳಿಯುತ್ತದೆ.

5. ಬಹಳ ಮುಖ್ಯವಾಗಿ ಪ್ರತಿ ವಿಷಯದಲ್ಲೂ ಕೂಡ ಓದಿದ ನಂತರ ಅದರಲ್ಲಿರುವ ಮುಖ್ಯ ಅಂಶಗಳನ್ನು ಕೀ ನೋಟ್ಸ್ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆ ಹೆಸರು, ವಿಳಾಸ, ಫಾರ್ಮುಲಾ ಈ ಅಂಶಗಳನ್ನು ವಿಷಯವಾರು ಬರೆದಿಟ್ಟುಕೊಳ್ಳಬೇಕು.

6. ಓದಿದಂತಹ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದರೆ ಒಂದು ಕಥೆಯ ರೂಪದಲ್ಲಿ ಅದನ್ನ ಮನನ ಮಾಡುವುದರ ಮೂಲಕ ಮನಸ್ಸಿನಲ್ಲಿ ಉಳಿಸಿಕೊಳ್ಳಬಹುದು.

7. ಅಧ್ಯಯನ ಮಾಡುವಂತ ಸ್ಥಳ.ಮನೆಯಲ್ಲಿ ಅಧ್ಯಯನ ಮಾಡುವಂತಹ ಪ್ರಶಾಂತವಾದ ಸ್ಥಳವನ್ನು ನಿಗದಿಪಡಿಸಿಕೊಳ್ಳುವುದು ಸೂಕ್ತ, ತಾವು ಅಧ್ಯಯನ ಮಾಡುವ ಸ್ಥಳದಲ್ಲಿ ಟಿವಿ, ರೇಡಿಯೋ, ಮೊಬೈಲ್ ಇತರೆ ವಿವಿಧ ಮನೋರಂಜನ ವಸ್ತುಗಳಿಂದ ದೂರವಿರಬೇಕು. ಹಾಗೂ ತಮಗೆ ಅಧ್ಯಯನಕ್ಕೆ ಅವಶ್ಯಕತೆ ಇರುವ ಪುಸ್ತಕ, ಪೆನ್ನು, ಪೆನ್ಸಿಲ್ ಮ್ಯಾಪ್ ಪ್ರತಿಯೊಂದು ಕೂಡ ಆ ಸ್ಥಳದಲ್ಲಿ ಇದ್ದರೆ ಉತ್ತಮ.

8. ಪ್ರತಿ ವಿಷಯವಾರು ಪುಸ್ತಕ ಹಾಗೂ ನೋಟ್ಸ್ ಒಂದೇ ಕಡೆ ಇಡುವುದರ ಮೂಲಕ ಹಾಗೂ ತಮ್ಮ ಕೀ ನೋಟ್ಸ್ ಗಳನ್ನು ನಿರಂತರ ಗಮನಹರಿಸುವುದು.

9. ಆಯಾ ದಿನ ಓದಿದಂತಹ ವಿಷಯಗಳನ್ನು ಹಾಗೂ ಮುಖ್ಯವಾಗಿರುವ ಅಂಶಗಳನ್ನು ನಿರಂತರ ಪುನಾರಾವರ್ತನೆ ಮಾಡುವುದು ಉತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ.

10. ಅಧ್ಯಯನದ ಸಂದರ್ಭದಲ್ಲಿ ಕನಿಷ್ಠ ಒಂದು ಗಂಟೆಗೆ ಒಮ್ಮೆಯಾದರೂ ಚಿಕ್ಕ ಬ್ರೇಕ್ ತೆಗೆದುಕೊಳ್ಳುವುದರ ಮೂಲಕ, ಆ ಸಂದರ್ಭದಲ್ಲಿ ತಮಗೆ ಇಷ್ಟವಾದ ಸ್ಥಳದಲ್ಲಿ ಎರಡು 2 ಮೂರು ನಿಮಿಷ ಸರಳ ವಾಕ್ ಮಾಡುವುದು.

11. ನಿರಂತರ ಪರಿಶ್ರಮದಿಂದ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಆಯಾ ವಿಷಯದಲ್ಲಿ ಮುಖ್ಯ ಇರುವಂತಹ ಅಂಶಗಳನ್ನು ನಿರಂತರವಾಗಿ ಬರೆಯುವುದರ ಮೂಲಕ ಮನದಟ್ಟು ಮಾಡಿಕೊಳ್ಳುವುದು.

12. ಹಾಗೂ ಈ ಹಿಂದಿನ ಸಾಲಿನ ಕನಿಷ್ಠ 5 ರಿಂದ 10 ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರ ಮೂಲಕ ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬಹುದು .

13. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಬಹಳಷ್ಟು ವಿದ್ಯಾರ್ಥಿಗಳು ನಿದ್ದೆಯನ್ನು ಬಿಟ್ಟು ನಿರಂತರವಾಗಿ 18 ರಿಂದ 20 ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿದ್ದು , ಇದು ತಪ್ಪು ವಿಧಾನವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ದೆ ಅವಶ್ಯಕವಾಗಿರುತ್ತದೆ.

14. ಬಹಳ ಮುಖ್ಯವಾಗಿ ಪ್ರತಿ ವಿದ್ಯಾರ್ಥಿಯು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಪರೀಕ್ಷೆ ಸಮಯದಲ್ಲಿ ಹೊರಗಿನ ಜಂಕ್ ಫುಡ್, ಆರೋಗ್ಯಕ್ಕೆ ಹಾನಿ ಮಾಡುವಂತಹ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸಬಾರದು. ಮನೆಯಲ್ಲಿ ಸಿದ್ದಪಡಿಸಿದ ಸರಳ ಆಹಾರವನ್ನೇ ಬಳಸಬೇಕು. ಇದರಿಂದ ಆರೋಗ್ಯವೂ ಕೂಡ ಕಾಪಾಡಿಕೊಳ್ಳಬಹುದು.

15. ಎಲ್ಲಕ್ಕಿಂತ ಮುಖ್ಯವಾಗಿ ಏಕಾಗ್ರತೆ ಬಹಳ ಮುಖ್ಯ. ಓದಿದಂತಹ ಎಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯಬೇಕಾದರೆ, ಮನಸ್ಸಿನ ಏಕಾಗ್ರತೆ ಅತ್ಯಂತ ಅವಶ್ಯಕವಾಗಿದೆ. ಆ ಒಂದು ನಿಟ್ಟಿನಲ್ಲಿ ನಿಮ್ಮ ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು.ಪರೀಕ್ಷೆ ಸಮಯದ ತಯಾರಿಪರೀಕ್ಷೆ ಬರೆಯುತ್ತಿರುವ ಪ್ರತಿ ವಿದ್ಯಾರ್ಥಿಯ ಪರೀಕ್ಷೆಯ ದಿನ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಪೂರ್ವ ತಯಾರಿಯಾಗಿ ಹಾಲ್ ಟಿಕೆಟ್, ತಮಗೆ ಸೂಕ್ತವೆನಿಸಿದ 2 ರಿಂದ 3 ಪೆನ್ನುಗಳು, ನೀರಿನ ಬಾಟಲ್, ಅವಶ್ಯಕತೆ ಇರುವ ಪರಿಕರಕಗಳು,

ಆರೋಗ್ಯ ಸಮಸ್ಯೆ ಇದ್ದರೆ ಔಷಧಿ ಮಾತ್ರೆಗಳು ಮುಂಚಿತವಾಗಿಯೇ ಸಿದ್ಧಪಡಿಸಿ ಇಟ್ಟುಕೊಳ್ಳುವುದು ಸೂಕ್ತ. ಇದರಿಂದ ಆತಂಕಕ್ಕೊಳಗಾಗುವುದು ತಪ್ಪುತ್ತದೆ.ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಯೋಚಿಸುವುದೇನೆಂದರೆ ,

ಇತರೆ ಸ್ನೇಹಿತರು ತುಂಬಾ ಓದಿದ್ದಾರೆ. ಅವರು ನನಗಿಂತ ಉತ್ತಮ ಅಂಕ ಪಡೆಯಬಹುದು ಎಂದು ಇತರರನ್ನು ಹೋಲಿಕೆ ಮಾಡಿಕೊಳ್ಳುವುದರ ಮೂಲಕ ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಹಾಗೂ ಅತಿಯಾದ ನಿರೀಕ್ಷೆಗೆ ಒಳಗಾಗದೆ , ತಾವು ಅಧ್ಯಯನ ಮಾಡಿದ ಸಂಪೂರ್ಣ ವಿಷಯವನ್ನು ಧೈರ್ಯವಾಗಿ ಪರೀಕ್ಷೆ ಬರೆಯುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.ಬಹಳ ಮುಖ್ಯವಾಗಿ ಪರೀಕ್ಷೆಯಲ್ಲಿ 6 ವಿಷಯಗಳು ಇರುವ ಕಾರಣ, ಒಂದು ವಿಷಯದ ಪರೀಕ್ಷೆ ಮುಕ್ತಾಯವಾದ ನಂತರ ಆ ವಿಷಯದ ಬಗ್ಗೆ ಯೋಚಿಸಿ ಚರ್ಚಿಸುವುದರ ಮೂಲಕ ಸಮಯ ವ್ಯರ್ಥ ಮಾಡುವುದಕ್ಕಿಂತ ,

ಮುಂದಿನ ವಿಷಯದ ಪತ್ರಿಕೆಯ ಕುರಿತು ತಯಾರಿ ನಡೆಸುವುದು ಉತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ.ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು ತಿಳಿಸುತ್ತಾ ಯಾವುದೇ ಆತಂಕ, ಭಯ ಹಾಗೂ ಒತ್ತಡಕ್ಕೆ ಒಳಗಾಗದೆ ಪ್ರಾಮಾಣಿಕ ಪ್ರಯತ್ನ ಮತ್ತು ನಿರಂತರ ಪರಿಶ್ರಮದಿಂದ ಖಂಡಿತ ಉತ್ತಮವಾದ ಫಲಿತಾಂಶ ಪಡೆಯಬಹುದು.ಪೋಷಕರ ಪಾತ್ರ ಹಾಗೂ ಜವಾಬ್ದಾರಿಗಳುತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕಾದರೆ, ಪೋಷಕರ ಪಾತ್ರ ಅತ್ಯಂತ ಮಹತ್ವದ ಜವಾಬ್ದಾರಿಯಾಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಒತ್ತಡ ಹಾಗೂ ಗೊಂದಲಕ್ಕೆ ಒಳಗಾಗುವ ಸಾಧ್ಯತೆಗಳಿರುವ ಕಾರಣ ಅವರಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಪೋಷಕರಿಂದ ಮಾತ್ರ ಸಾಧ್ಯ. ಅವರ ಆರೋಗ್ಯದ ಕಡೆ ಗಮನ ನೀಡುವುದರ ಜೊತೆಗೆ,ಅವರು ಅಧ್ಯಯನ ಮಾಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ಅವರ ಏಕಾಗ್ರತೆಗೆ ತೊಂದರೆಯಾಗುವ ರೀತಿಯಲ್ಲಿ ಜೋರಾಗಿ ಮಾತನಾಡುವುದು, ಹಾಡುಗಳನ್ನು ಕೇಳುವುದು, ಟಿವಿ ನೋಡುವುದು, ದೂರದ ಪ್ರಯಾಣ ಕೈಗೊಳ್ಳುವುದು, ಮದುವೆ ಹಾಗೂ ಇತರೆ ಸಮಾರಂಭಗಳನ್ನು ಇಟ್ಟುಕೊಳ್ಳುವುದು, ಕೌಟುಂಬಿಕ ಕಲಹ ಮಾಡುವುದು, ನೆರೆಹೊರೆಯವರನ್ನು ಮನೆಯಲ್ಲಿ ಕೂರಿಸಿಕೊಂಡು ಅನಾವಶ್ಯಕ ಚರ್ಚೆ ಮಾಡುವುದು, ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಕರೆದು ಬೇರೆ ಕೆಲಸ ಹಚ್ಚುವುದನ್ನು ಪೋಷಕರು ಮಾಡಬಾರದು. ಇದರಿಂದ ಮಕ್ಕಳ ಏಕಾಗ್ರತೆ ಕುಂಠಿತ ವಾಗಬಹುದು. ಇಂತಹ ಘಟನೆಗಳು ನಡೆಯದಂತೆ ಪೋಷಕರು ಗಮನ ಹರಿಸಬೇಕು,ಪರೀಕ್ಷೆ ಕೇಂದ್ರ ದೂರವಿದ್ದಲ್ಲಿ ಪೋಷಕರೂ ಮಕ್ಕಳನ್ನು ಕರೆದುಕೊಂಡು ಹೋಗುವುದು. ನೊಂದಣಿ ಸಂಖ್ಯೆ ಇರುವ ಪರೀಕ್ಷಾ ಕೊಠಡಿ ಖಾತ್ರಿ ಪಡಿಸಿಕೊಳ್ಳುವುದು. ಹಾಗೂ ಫಲಿತಾಂಶದ ಕುರಿತು ಇಷ್ಟೇ ಅಂಕಗಳು ಬರಬೇಕೆಂದು ಮಕ್ಕಳಿಗೆ ಒತ್ತಡ ಹಾಕದೆ, ತನಗೆ ಗುತ್ತಿರುವ ವಿಷಯವನ್ನು ಅಚ್ಚುಕಟ್ಟಾಗಿ ಬರೆಯುವಂತೆ ಪ್ರೋತ್ಸಾಹಿಸಿ ಶುಭಾಶಯಗಳು ತಿಳಿಸುವುದರಿಂದ ಮಕ್ಕಳಲ್ಲಿ ಅತ್ಮ ಸ್ಥರ್ಯ ಹೆಚ್ಚಾಗುತ್ತದೆ. ಪರೀಕ್ಷೆಗೆ ಹಾಜರಾಗಿತ್ತಿರುವ ಎಲ್ಲ ಮಕ್ಕಳಿಗೂ ಮತ್ತೊಮ್ಮೆ ಶುಭಾಶಯಗಳು.Special Column : Tajuddin Khan, President, District Child Welfare Committee, Shimoga District. : | Don’t be afraid of SSLC exam be confident..!

Share with friends