ಆಯೋಗ (UPSC) ಪರೀಕ್ಷೆ ಅಂತ ಕೇಳಿದರೆ ಸಾಕು ಅನೇಕರು ಹುಬ್ಬೇರಿಸುತ್ತಾರೆ. ಹೌದು, ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು (Competitive Exams) ಪಾಸ್ ಮಾಡುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಬಿಡಿ, ಹಾಗಂತ ಇದು ಪಾಸ್ ಆಗಲು
ಅಸಾಧ್ಯವಾಗಿರುವ ಪರೀಕ್ಷೆಯೂ ಅಲ್ಲ.ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸ್ ಮಾಡಬೇಕು ಅಂತ ಹೇಳಿದರೆ ಕಠಿಣವಾದ ಪರಿಶ್ರಮ ಎನ್ನುವುದಕ್ಕಿಂತಲೂ ತುಂಬಾನೇ ಬುದ್ದಿವಂತಿಕೆಯಿಂದ ಪರೀಕ್ಷೆಗೆ ತಯಾರಿ ಮಾಡಿದರೆ ಇದನ್ನು ಸುಲಭವಾಗಿ ಪಾಸ್ ಮಾಡಬಹುದು ಅಂತ ಈ ಪರೀಕ್ಷೆಯನ್ನು ಈಗಾಗಲೇ ರ್ಯಾಂಕ್ ಪಡೆದು ಪಾಸ್ ಆಗಿರುವ ಅನೇಕರು ಹೇಳುತ್ತಾರೆ.ಆದರೆ ಕೆಲವರು ತುಂಬಾನೇ ಪರಿಶ್ರಮ ಹಾಕಿ, ಜೀವನದಲ್ಲಿ ಕೆಲವೊಂದನ್ನು ತ್ಯಾಗ ಮಾಡಿ, ಇನ್ನೂ ಕೆಲವೊಂದಿಷ್ಟು ಇಷ್ಟವಾದ ವಿಷಯಗಳಿಂದ ಮತ್ತು ವ್ಯಕ್ತಿಗಳಿಂದ ದೂರ ಉಳಿದುಕೊಂಡು ಪರೀಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವುದು ಲಕ್ಷಾಂತರ ಭಾರತೀಯರ ಕನಸಾಗಿರುತ್ತದೆ ಅಂತ ಹೇಳಿದರೆ ಸುಳ್ಳಲ್ಲ.ದೇಶಾದ್ಯಂತ ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಅವರಲ್ಲಿ ಕೆಲವರು ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.2017 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಪಡೆದ ಅನು ಕುಮಾರಿ..ಇಲ್ಲಿಯೂ ಸಹ ನಾವು ನಿಮಗೆ ಒಬ್ಬ ಯುಪಿಎಸ್ಸಿ ಟಾಪರ್ ಹೇಗೆ ತಮ್ಮ ಪ್ರೀತಿಯ ಮಗನಿಂದ ದೂರ ಉಳಿದುಕೊಂಡು ಮನಸ್ಸನ್ನು ಗಟ್ಟಿಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸಿ ಕೊನೆಗೆ 2ನೇ ರ್ಯಾಂಕ್ ಪಡೆದಿದ್ದಾರೆ. ಐಎಎಸ್ ಅಧಿಕಾರಿ ಅನು ಕುಮಾರಿ ಅವರು 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದಲ್ಲಿಯೇ 2ನೇ ರ್ಯಾಂಕ್ ಪಡೆದಿದ್ದರು.ಈ ಪರೀಕ್ಷೆಯನ್ನು ಪಾಸಾದಾಗ ಇವರು ಒಂದು ಮಗುವಿಗೆ ತಾಯಿಯಾಗಿದ್ದರು. ಐಎಎಸ್ ಅಧಿಕಾರಿ ಅನು ಕುಮಾರಿ ಹರಿಯಾಣದ ಸೋನಿಪತ್ ಮೂಲದವರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದಾರೆ ಮತ್ತು ನಾಗ್ಪುರದ ಐಎಂಟಿಯಿಂದ ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.ಕೈ ತುಂಬಾ ಸಂಬಳ ಬರುವ ಕೆಲಸಕ್ಕೆ ಗುಡ್ ಬೈ ಹೇಳಿ ಯುಪಿಎಸ್ಸಿ ಪರೀಕ್ಷೆ ಬರೆದ ಅನು..ಐಎಎಸ್ ಅಧಿಕಾರಿ ಅನು ಕುಮಾರಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕೈ ತುಂಬಾ ಸಂಬಳ ಸಹ ಪಡೆಯುತ್ತಿದ್ದರು, ಆದರೆ ಅವರು ಆ ಕೆಲಸವನ್ನು ತೊರೆದು ತಮ್ಮ ಕನಸಿನ ಐಎಎಸ್ ಅಧಿಕಾರಿಯಾಗುವ ಕಡೆಗೆ ಮುನ್ನಡೆದರು ಅಂತ ಹೇಳಬಹುದು.”ನನ್ನ ಕೆಲಸ ಚೆನ್ನಾಗಿಯೇ ಇತ್ತು, ಕೈ ತುಂಬಾ ಸಂಬಳ ಬೇರೆ ಬರುತ್ತಿತ್ತು. ಆದರೆ ಮನಸ್ಸಿಗೆ ಒಂದು ತೃಪ್ತಿ ಇರಲಿಲ್ಲ ನೋಡಿ. ಎಲ್ಲವೂ ಎಷ್ಟು ಯಾಂತ್ರಿಕವಾಯಿತು ಎಂದರೆ ಒಂದು ಹಂತದಲ್ಲಿ ನಾನು ಅದನ್ನು ಸಹಿಸಲು ಸಾಧ್ಯವಾಗಲಿಲ್ಲ” ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.ಮದುವೆಯ ನಂತರ ಅನು ಕುಮಾರಿ ಅವರು ಗುರ್ಗಾಂವ್ ಗೆ ವರ್ಗಾವಣೆಗೊಂಡರು. ಮದುವೆಯಾದ ಕೆಲವು ದಿನಗಳ ನಂತರ, ಅವರು ತಮ್ಮ ಕೆಲಸವನ್ನು ಬಿಟ್ಟು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು.ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ಈ ಆಲೋಚನೆಯನ್ನು ಕೈಬಿಡುವಂತೆ ಅನೇಕ ಜನರು ಆಕೆಗೆ ಸಲಹೆ ನೀಡಿದರು. ಆದರೆ ಐಎಎಸ್ ಅಧಿಕಾರಿಯಾಗುವುದು ಅವರ ಕನಸಾಗಿದ್ದರಿಂದ ಅವರು ಯಾರ ಮಾತನ್ನೂ ಕೇಳಲಿಲ್ಲ.UPSC Success Story: ಸರ್ಕಾರದ ಸಹಾಯ ಸಿಗದಿದ್ದರೂ ಜನರಿಗಾಗಿ 100 km ರಸ್ತೆ ನಿರ್ಮಿಸಿದ IAS ಅಧಿಕಾರಿಪರೀಕ್ಷೆಗೆ ತಯಾರಿ ನಡೆಸುವಾಗ ಎರಡು ವರ್ಷ ಮಗನಿಂದ ದೂರ ಇದ್ದ ಅನು..ಅನು ಕುಮಾರಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಸುಮಾರು ಎರಡು ವರ್ಷಗಳ ಕಾಲ ಅವರು ತಮ್ಮ ಮಗನಿಂದ ದೂರವಿದ್ದರಂತೆ. ಯುಪಿಎಸ್ಸಿ ಪರೀಕ್ಷೆಯನ್ನು ಬರೆದ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣರಾದಾಗ ಅನು ಕುಮಾರಿ ತುಂಬಾನೇ ಬೇಸರ ಮಾಡಿಕೊಂಡು ಕಣ್ಣೀರಿಟ್ಟಿದ್ದರಂತೆ.ಆದರೆ ಛಲ ಬಿಡದೆ ತಮ್ಮ ಎರಡನೇ ಪ್ರಯತ್ನದಲ್ಲಿ, ಅವರು ಇಡೀ ಭಾರತದಲ್ಲಿಯೇ 2ನೇ ರ್ಯಾಂಕ್ ಪಡೆದರು ಮತ್ತು 2017 ರಲ್ಲಿ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ಸಹ ಈಡೇರಿಸಿಕೊಂಡರು.