Home>Saf news job education>VIRAL NEWS: ಥೂ.. ಅಸಹ್ಯ.. ತನ್ನ ಮೂತ್ರದಲ್ಲಿ ಆಹಾರ ಬೇಯಿಸಿ ಮನೆಮಂದಿಗೆ ಉಣಬಡಿಸುತ್ತಿದ್ದಳು..!: VIDEO
VIRAL NEWS: ಥೂ.. ಅಸಹ್ಯ.. ತನ್ನ ಮೂತ್ರದಲ್ಲಿ ಆಹಾರ ಬೇಯಿಸಿ ಮನೆಮಂದಿಗೆ ಉಣಬಡಿಸುತ್ತಿದ್ದಳು..!: VIDEO
ಲಕ್ನೋ: ಉತ್ತರಪ್ರದೇಶ ಗಾಜಿಯಾಬಾದ್‌ನಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ಕೆಲಸ ಮಾಡುವ ಗೃಹಿಣಿಯೊಬ್ಬಳು ಹಲವು ದಿನಗಳಿಂದ ತನ್ನ ಮೂತ್ರದಲ್ಲಿ ಆಹಾರವನ್ನು ಬೇಯಿಸಿ ಇಡೀ ಕುಟುಂಬಕ್ಕೆ ಉಣಬಡಿಸುತ್ತಿರುವುದು ಬಯಲಾಗಿದೆ.ಕೆಲ ತಿಂಗಳಿಂದ ಕುಟುಂಬಸ್ಥರು ಲಿವರ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ವೈದ್ಯರನ್ನು ಸಂಪರ್ಕಿಸಿದರೂ ಪರಿಹಾರ ಸಿಗಲಿಲ್ಲ. ಇದಾದ ಬಳಿಕ ಮನೆಯವರು ಅಡುಗೆ ಮನೆಯಲ್ಲಿ ಸಿಸಿಟಿವಿ ಅಳವಡಿಸಿದ್ದು, ಆಗ ಮಹಿಳೆಯ ನೀಚ ಕೃತ್ಯ ಬಯಲಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಅಡುಗೆ ಮನೆಯ ಪಕ್ಕದಲ್ಲಿದ್ದ ಬಾಲ್ಕನಿಯ ಡೋರ್ ಮುಚ್ಚಿ ನಂತರ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ. ಇದರೊಂದಿಗೆ ಹಿಟ್ಟನ್ನು ಬೆರೆಸಿ ರೊಟ್ಟಿ ತಯಾರಿಸಿ ಇಡೀ ಕುಟುಂಬಕ್ಕೆ ಉಣಬಡಿಸಿದ್ದಾಳೆ. ಇದಾದ ನಂತರ ಕುಟುಂಬದವರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.8 ವರ್ಷಗಳಿಂದ ಕೆಲಸ: ಮನೆಯ ಸಹಾಯಕಿ ಕಳೆದ 8 ವರ್ಷಗಳಿಂದ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದಾಳೆ. ಈಕೆ ಅಸಹ್ಯಕರ ಕೆಲಸವನ್ನು ಬಹಳ ದಿನಗಳಿಂದ ಮಾಡುತ್ತಿದ್ದಳು ಎಂದು ಕುಟುಂಬ ದೂರಿನಲ್ಲಿ ಆರೋಪಿಸಿದೆ. ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.