ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌? ಜಾತಿವಾರು ಮಾಹಿತಿ ತಿಳಿಯಿರಿ

ಏಪ್ರಿಲ್‌ 06: ಮೇ 10ರಂದು ನಡೆಯಲಿರುವ ಕರ್ನಾಟಕ ಚುನಾವಣೆಗೆ ( Karnataka Assembly Elections 2023 ) ಕಾಂಗ್ರೆಸ್‌ನ ( Congress ) ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬಿದ್ದಿದೆ. ಕಳೆದ ತಿಂಗಳು 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಪ್ರಕಟಿಸಿತ್ತು.

ಈಗ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದ 58 ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.ಕಾಂಗ್ರೆಸ್‌ ಪ್ರಕಟಿಸಿರುವ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಲಿಂಗಾಯತ ಸಮುದಾಯದ ಹತ್ತು ಮಂದಿಗೆ ಟಿಕೆಟ್ ನೀಡಲಾಗಿದೆ. ಇದರ ಜೊತೆಗೆ ರೆಡ್ಡಿ ಲಿಂಗಾಯತ ಮುಖಂಡರಿಗೆ ಟಿಕೆಟ್ ದೊರೆತಿದೆ. ಒಟ್ಟು 11 ಲಿಂಗಾಯತ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಘೋಷಿಸಿದೆ.ಮೇಲುಕೋಟೆಯಲ್ಲಿ ರೈತ ಸಂಘದ ದಿವಂಗತ ಪುಟ್ಟಣ್ಣ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರು ಸರ್ವೋದಯ ಕರ್ನಾಟಕ ಪಾರ್ಟಿಯಿಂದ ಕಣಕ್ಕಿಳಿಯಲಿದ್ದಾರೆ. ಅವರಿಗೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸಿದೆ. ಅವರನ್ನೂ ಸೇರಿ 11 ಒಕ್ಕಲಿಗ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ.ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಮೂವರು ಅಭ್ಯರ್ಥಿಗಳನ್ನು ಘೋಷಿಸಿದೆ. ಕುರುಬ ಸಮುದಾಯಕ್ಕೆ ಮೂರು ಟಿಕೆಟ್‌ಗಳನ್ನು ಕಾಂಗ್ರೆಸ್‌ ನೀಡಿದೆ. ಎಸ್‌ಸಿ ( ಎಡ ), ಎಸ್‌ಸಿ ( ಬಲ ) ಹಾಗೂ ಎಸ್‌ಟಿ ಸಮುದಾಯಗಳಿಗೆ ತಲಾ 2 ಟಿಕೆಟ್‌ಗಳನ್ನು ಕಾಂಂಗ್ರೆಸ್‌ ಘೋಷಿಸಿದೆ. ರೆಡ್ಡಿ, ರಜಪೂತ, ಮರಾಠಿ, ನಾಯ್ಡು, ಈಡಿಗ, ಒಬಿಸಿ, ಮೊಗವೀರ, ಸಮುದಾಯಗಳಿವೆ ತಲಾ ಒಂದು ಟಿಕೆಟ್‌ಗಳನ್ನು ನೀಡಲಾಗಿದೆ.

ಕಳೆದ ತಿಂಗಳು ಕಾಂಗ್ರೆಸ್‌ ಪಕ್ಷವು 124 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚು ಪ್ರಾತಿನಿದ್ಯ ನೀಡಲಾಗಿದೆ. 32 ಲಿಂಗಾಯತ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಒಕ್ಕಲಿಗರಿಗೆ 19, ಪರಿಶಿಷ್ಟ ಜಾತಿಯವರಿಗೆ 22 ಟಿಕೆಟ್‌ಗಳನ್ನು ಕಾಂಗ್ರೆಸ್‌ ಘೋಷಿಸಿದೆ. ಮುಸ್ಲಿಮರು 8 ಹಾಗೂ ಬ್ರಾಹ್ಮಣರಿಗೆ 5 ಟಿಕೆಟ್‌ ನೀಡಲಾಗಿದೆ. ಕುರುಬರಿಗೆ 5 ಹಾಗೂ ಈಡಿಗರಿಗೆ 4 ಟಿಕೆಟ್‌ಗಳನ್ನು ಕಾಂಗ್ರೆಸ್‌ ನೀಡಿದೆ.ಎರಡನೇ ಪಟ್ಟಿಯಲ್ಲಿನ ಪ್ರಮುಖರುಮೂರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿರುವ ಬಿಜೆಪಿ ಮಾಜಿ ಎಂಎಲ್ ಸಿ ಬಾಬುರಾವ್ ಚಿಂಚನಸೂರ್ ಅವರನ್ನು ಗುರ್ಮಿಟ್ಕಲ್‌ನಿಂದ ಪಕ್ಷ ಕಣಕ್ಕಿಳಿಸಿದೆ. 2018ರ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬಾದಾಮಿಯಿಂದ ಭೀಮಸೇನ್ ಬಿ ಚಿಮ್ಮಣ್ಣಕಟ್ಟಿ ಅವರನ್ನು ಕಣಕ್ಕಿಳಿಸಿದೆ. ಬಾಗಲಕೋಟೆಯಿಂದ ಹುಲ್ಲಪ್ಪ ವೈ ಮೇಟಿ, ಮಂಡ್ಯದಿಂದ ಪಿ ರವಿಕುಮಾರ್ ಮತ್ತು ಕೊಳ್ಳೇಗಾಲದಿಂದ ಎ ಆರ್ ಕೃಷ್ಣಮೂರ್ತಿ (ಎಸ್‌ಸಿ) ಸ್ಪರ್ಧಿಸಲಿದ್ದಾರೆ.ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳೆಂದರೆ, ಬಡಾಸಾಹೇಬ್ ಡಿ ಪಾಟೀಲ್ (ಕಿತ್ತೂರು), ರಾಮಪ್ಪ ಬಾಳಪ್ಪ ತಿಮ್ಮಾಪುರ (ಎಸ್‌ಸಿ) (ಮುಧೋಳ), ಅಬ್ದುಲ್ ಹಮೀದ್ ಕಾಜಾಸಾಹೇಬ್ ಮುಶ್ರೀಫ್ (ಬಿಜಾಪುರ ನಗರ), ವಿ ರಘುನಾಥ ನಾಯ್ಡು (ಪದ್ಮನಾಭ ನಗರ), ಕೇಶವ ರಾಜಣ್ಣ ಬಿ (ಯಲಹಂಕ), ಎಸ್ ಬಾಲರಾಜ ಗೌಡ (ಯಶವಂತಪುರ) ಅವರು ಹೆಸರುಗಳಿವೆ.

Share with friends

Related Post

Leave a Reply

Your email address will not be published.