ದಾವಣಗೆರೆಜಿಲ್ಲಾ ಪೊಲೀಸ್ ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು

ದಾವಣಗೆರೆಜಿಲ್ಲಾಪೊಲೀಸ್ ಕರ್ನಾಟಕ ವಿಧಾನ ಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು ಡಾ.ಕೆ.ತ್ಯಾಗರಾಜನ್ ಐಪಿಎಸ್, ಮಾನ್ಯ ಉಪ ಪೊಲೀಸ್ ಮಹಾ ನೀರಿಕ್ಷಕರವರು, ಪೂರ್ವ ವಲಯ ರವರ ನೇತೃತ್ವದಲ್ಲಿ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ಪಥ ಸಂಚಲನ ದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್ ಬಿ ಬಸರಗಿ ರವರು, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಮಲ್ಲೇಶ್ ದೊಡ್ಮನಿ ರವರು, ಶ್ರೀ ಕೆ ಕೃಷ್ಣಮೂರ್ತಿ, ಡಿವೈಎಸ್ಪಿ, ಡಿ ಎ ಆರ್, ದಾವಣಗೆರೆ ಮತ್ತು ಸಿ.ಆರ್.ಪಿ.ಎಫ್ ಅಧಿಕಾರಿಗಳಾದ ಶ್ರೀಮತಿ ಶೈಲಾ ಎಸ್ ಮಹಾರಾಣಾ, ಶ್ರೀ ತಾರಾಚಂದ್, ಶ್ರೀ ಎಲ್ ಎನ್ ಉಪದ್ಯಾಯ್ ರವರು & ಸಿಬ್ಬಂದಿಗಳು ಸೇರಿದಂತೆ ನಗರ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ DAR ಅಧಿಕಾರಿ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

Share with friends

Related Post

Leave a Reply

Your email address will not be published.