Browse

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರಿಲ್ಯಾಕ್ಸ್ ಮಗ ಯತೀಂದ್ರರಿಗೆ ಫುಲ್ ಟೆನ್ಷನ್!ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ,

ತವರು ಕ್ಷೇತ್ರ ವರುಣಾದಿಂದಲೇ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ಕ್ಷೇತ್ರದ ಚುನಾವಣಾ ಪ್ರಚಾರದ ಜವಬ್ದಾರಿಯನ್ನು ತಮ್ಮ ಮಗನಿಗೆ ವಹಿಸಿ, ತಾವು ರಾಜ್ಯ ಪ್ರಚಾರ ಮಾಡುತ್ತಿದ್ದಾರೆವರುಣಾದಲ್ಲಿ ಸಿದ್ದು ಕೂಲ್​ ಆಗಿದ್ದರೆ, ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಒತ್ತಡ ಎದುರಾಗಿದೆ.ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಭಯ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಮಗನಿಗೂ ಕಾಡುತ್ತಿದೆಯಾ? ಪ್ರಚಾರದ ಆರಂಭದಲ್ಲೇ ಯತೀಂದ್ರ ಅವರು ಆತಂಕ ವ್ಯಕ್ತ ಪಡಿಸಿದ್ದಾರೆ. ಚಾಮುಂಡೇಶ್ವರಿ ರೀತಿಯ ಸೋಲು ವರುಣಾದಲ್ಲೂ ಮರಕಳಿಸುವ ಭಯವಿದೆ.ಸಾರ್ವಜನಿಕ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಯತೀಂದ್ರ, ಸಿದ್ದರಾಮಯ್ಯ ಎಲ್ಲೇ ನಿಂತರು ಸರಿ ಅವರನ್ನು ಸೋಲಿಸಲು ಎಲ್ಲರೂ ಒಂದಾಗುತ್ತಾರೆ. ಒಟ್ಟಾಗಿ ಸೇರಿ ಷಡ್ಯಂತ್ರ ರೂಪಿಸುತ್ತಾರೆ. ಹಣದ ಹೊಳೆ ಹರಿಸುತ್ತಾರೆ ಎಂದು ಆರೋಪಿಸಿದ್ದಾರೆ.ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆಯಾಗಿದೆ. ಹೀಗಾಗಿ ಅವರು ಗೆದ್ದು ಗೌರವಯುತವಾಗಿ ನಿವೃತ್ತಿ ಪಡೆಯಬೇಕು. ಬಹಳ ಎಚ್ಚರಿಕೆಯಿಂದ ಚುನಾವಣೆ ನಡೆಸುವಂತೆ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರಿಗೆ ಯತೀಂದ್ರ ಅವರು ಕರೆ ನೀಡಿದ್ದಾರೆ.

Share with friends