ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

(ಏ.06): ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರ ಬಿಡುಗಡೆ ಮಾಡಿದ್ದು, ಬಾಕಿ 58 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲದ ಹಿನ್ನೆಲೆಯಲ್ಲಿ ಬಿಜೆಪಿ ಪಟ್ಟಿ ಪಗ್ರಕಟವಾದ ನಂತರವೇ ಬಿಡುಗಡೆ ಮಾಡಲು ಹೈಕಮಾಂಡ್‌ ತೀರ್ಮಾನಿಸಿದೆ.

ಇಂದು ನವದೆಹಲಿಯ ರಾಜಮಾರ್ಗದಲ್ಲಿರು ವ ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಮುಖಂಡರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ, ಹರಿಪ್ರಸಾದ್‌ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಉಪಾಹಾರ ಸೇವಿಸಿ ನಂತರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಸಭೆಗಳ ಮೇಲೆ ಸಭೆಯನ್ನು ನಡೆಸಿದ್ದ ಕಾಂಗ್ರೆಸ್‌ ಮುಖಂಡರು ಕೊನೆಗೂ 42 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ಆದರೆ, ಇನ್ನೂ 58 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಗೊಂದಲವನ್ನು ಬಗೆಹರಿಸಲಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.ಇನ್ನು ರಾಜ್ಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಲೇಬೇಕು ಎಂದು ತಂತ್ರ ರೂಪಿಸಿದ್ದಾರೆ. ಮತದಾನ ದಿನಕ್ಕೆ ಇನ್ನು 34 ದಿನಗಳು ಮಾತ್ರ ಬಾಕಿಯಿದ್ದರೂ ರಾಜ್ಯದ ಯಾವುದೇ ಪ್ರಭಲ ಪಕ್ಷಗಳು ಕೂಡ ಸಂಪೂರ್ಣವಾಗಿ 224ಚ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈಗಾಗಲೇ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದು 100 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಾಕಿ ಉಳಿಸಿಕೊಂಡಿತ್ತು. ಇಂದು 2ನೇ ಪಟ್ಟಿ ಬಿಡುಗಡೆ ಆಗಿದೆ. ಇನ್ನೊಂದು ಹಂತದಲ್ಲಿ ಬಿಡುಗಡೆ ಆಗುವ ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಗೆ ಟಾಂಗ್‌ ಕೊಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚಿಂತನೆ ಮಾಡಲಾಗಿದೆ.

ಪ್ರಮುಖ ಅಭ್ಯರ್ಥಿಗಳ ಮಾಹಿತಿ ಇಲ್ಲಿದೆ ನೋಡಿ1. ನಿಪ್ಪಾಣಿ- ಕಾಕಾಸಾಹೇಬ್‌ ಪಾಟೀಲ್2. ಗೋಕಾಕ್‌- ಮಹಂತೇಶ್‌ ಕಡಾಡಿ3. ಕಿತ್ತೂರು- ಬಾಬಾಸಾಹೇಬ್‌ ಬಿ.ಪಾಟೀಲ್4. ಸೌದತ್ತಿ ಯಲ್ಲಮ್ಮ- ವಿಶ್ವಾಸ್‌ ವಸಂತ್‌ ವೈದ್ಯ5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ6. ಬೀಳಗಿ- ಜೆ.ಟಿ. ಪಾಟೀಲ್7.ಬದಾಮಿ- ಭೀಮಸೇನ್‌ ಬಿ. ಚಿಮ್ಮನಕಟ್ಟಿ8. ಬಾಗಲಕೋಟೆ – ಹುಲ್ಲಪ್ಪ ವೈ. ಮೇಟಿ9. ಬಿಜಾಪುರ ನಗರ- ಅಬ್ದುಲ್‌ ಹಮೀದ್‌ ಖಾಜಾಸಾಹೇಬ್ ಮುಶ್ರಿಫ್10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ11. ಅಫ್ಜಲ್‌ಪುರ – ಎಂ.ವೈ. ಪಾಟೀಲ್12. ಯಾದಗಿರಿ- ಚನ್ನರೆಡ್ಡಿ ಪಾಟೀಲ್‌ ತುಣ್ಣೂರ್13. ಗುರಮಿಠ್‌ಕಲ್‌- ಬಾಬುರಾವ್‌ ಚಿಂಚನಸೂರ14. ಗುಲ್ಬರ್ಗ ದಕ್ಷಿಣ – ಅಲ್ಲಮಪ್ರಭು ಪಾಟೀಲ್15.ಬಸವಕಲ್ಯಾಣ-ವಿಜಯ್ ಧರಮ್ ಸಿಂಗ್16.ಗಂಗಾವತಿ-ಇಕ್ಬಾಲ್ ಅನ್ಸಾರಿ17.ನರಗುಂದ-ಬಿ.ಆರ್.ಯಾವಗಲ್18. ಧಾರವಾಡ-ವಿನಯ್ ಕುಲಕರ್ಣಿ19. ಕುಲಘಟಗಿ-ಸಂತೋಷ್ ಎಸ್. ಲಾಡ್20.ಸಿರ್ಸಿ- ಭೀಮಣ್ಣ ನಾಯ್ಕ್21. ಯಲ್ಲಾಪುರ-ವಿ.ಎಸ್.ಪಾಟೀಲ್22. ಕುಡ್ಲಿಗಿ ಎಸ್ಟಿ-ಡಾ.ಶ್ರೀನಿವಾಸ್ ಎಂ.ಟಿ.23. ಮೊಳಕಾಲ್ಮೂರು-ಎಸ್ಟಿ-ಎನ್.ವೈ. ಗೋಪಾಲಕೃಷ್ಣ24. ಚಿತ್ರದುರ್ಗ-ಕೆ.ಸಿ.ವೀರೇಂದ್ರ (ಪಪ್ಪಿ)25. ಹೊಳಲ್ಕೆರೆ ಎಸ್ಸಿ- ಆಂಜನೇಯ ಎಚ್.26. ಚೆನ್ನಗಿರಿ-ಬಸವರಾಜು ವಿ. ಶಿವಗಂಗ27. ತೀರ್ಥಹಳ್ಲಿ-ಕಿಮ್ಮನೆ ರತ್ನಾಕರ್28. ಉಡುಪಿ- ಪ್ರಸಾದ್‌ರಾಜ್ ಕಾಂಚನ್29. ಕಡೂರು-ಆನಂದ್ ಕೆ.ಎಸ್30. ತುಮಕೂರು ನಗರ-ಇಕ್ಬಾಲ್ ಅಹ್ಮದ್31. ಗುಬ್ಬಿ-ಎಸ್.ಆರ್.ಶ್ರೀನಿವಾಸ್32. ಯಲಹಂಕ- ಕೇಶವ ರಾಜಣ್ಣ ಬಿ.33.ಯಶವಂತಪುರ-ಸ್.ಬೈರಾಜ್ ಗೌಡ34. ಮಹಾಲಕ್ಷ್ಮಿ ಲೇ ಔಟ್- ಕೇಶವಮೂರ್ತಿ35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು36.ಮೇಲುಕೋಟೆ- ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯ37. ಮಂಡ್ಯ- ಪಿ.ರವಿಕುಮಾರ್38. ಕೃಷ್ಣರಾಜಪೇಟೆ-ಬಿ.ಎಲ್.ದೇವರಾಜ್39. ಬೇಲೂರು-ಬಿ.ಶಿವರಾಮ್40. ಮಡಿಕೇರಿ- ಡಾ.ಮಂತರ್ ಗೌಡ41. ಚಾಮುಂಡೇಶ್ವರಿ-ಸಿದ್ದೇಗೌಡ42. ಕೊಳ್ಳೇಗಾಲ ಎಸ್ಸಿ ಮೀಸಲು- ಎ.ಆರ್.ಕೃಷ್ಣಮೂರ್ತಿಕೈ ಟಿಕೆಟ್‌ ತಪ್ಪಿಸಿಕೊಂಡ ಪ್ರಮುಖ ನಾಯಕರು:ವೈ. ಎಸ್. ವಿ ದತ್ತ- ಕಡೂರುವಡ್ನಾಳ್ ರಾಜಣ್ಣ- ಚನ್ನಗಿರಿರಘು ಆಚಾರ್- ಚಿತ್ರದುರ್ಗಮಂಜುನಾಥಗೌಡ- ತೀರ್ಥಹಳ್ಳಿಯೋಗೀಶ್ ಬಾಬು- ಮೊಳಕಾಲ್ಮೂರುಛಬ್ಬಿ- ಕಲಘಟಗಿ ದತ್ತಾ ನಂಬಿಕೆ ಹುಸಿಗೊಳಿಸಿದ ಕಾಂಗ್ರೆಸ್: ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಟಿಕೆಟ್‌ ಕೊಡುವಲ್ಲಿ ಕಾಂಗ್ರೆಸ್‌ ಕೈಕೊಟ್ಟಿದೆ. ಆದರೆ, ಕಳೆದ ಬಾರಿ ಜೆಡಿಎಸ್‌ನಿಂದ ಸೋತು ಸುಣ್ಣವಾಗಿದ್ದ ದತ್ತಾ ಅವರು, ಕಾಂಗ್ರೆಸ್‌ನಿಂದಾದರೂ ಗೆಲ್ಲೋಣ ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಅವರ ನಂಬಿಕೆಯನ್ನು ಕಾಂಗ್ರೆಸ್‌ ಹುಸಿಗೊಳಿಸಿದೆ.ಯೋಗೇಶ್‌ಬಾಬು ಗಲಾಟೆಗೆ ಬಗ್ಗದ ಕೈ ನಾಯಕರು: ಇತ್ತೀಚೆಗೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕಾಂಗ್ರೆಸ್‌ ಸೇರ್ಪಡೆ ಆಗಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಆದರೆ, ಕಳೆದ ಬಾರಿ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಯೋಗೇಶ್‌ಬಾಬು ಈ ಬಾರಿಯೂ ತಮಗೇ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ, ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ ಆಗುವ ದಿನದಂದು ಕೆಪಿಸಿಸಿ ಕಚೇರಿ ಮುಂದೆ ಭಾರಿ ಗಲಾಟೆಯನ್ನೂ ಮಾಡಿಸಿದ್ದನು. ಆದರೆ, ಈಗ ಟಿಕೆಟ್‌ ಕೈತಪ್ಪಿದ್ದು, ಅವರ ನಡೆ ಬದಲಾಗುವುದೇ ನೋಡಬೇಕಿದೆ.ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Share with friends

Related Post

Leave a Reply

Your email address will not be published.