ನನಗೆ ಸೂಪರ್ಪವರ್ ಇದೆ ಏನು ಆಗಲ್ಲ ಎಂದು ಹಾಸ್ಟೆಲ್ 4ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ! ನಂತರ ನಡೆದಿದ್ದಿಷ್ಟು. | College Student

https://youtu.be/qVeaGxE7t0Q?feature=shared

College Student : ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಜಿಗಿದ 19 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಕೊಯಮತ್ತೂರು ಬಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಭು, ತನಗೆ ಸೂಪರ್ಪವರ್ ಇದೆ ಎಂದು ಹೇಳಿ, ಅದನ್ನು ಪ್ರದರ್ಶಿಸಲು ನಾಲ್ಕನೇ ಮಹಡಿಯಿಂದ ಜಿಗಿದಿದ್ದಾನೆ.ಬಿದ್ದ ರಭಸಕ್ಕೆ ಕಾಲು, ಕೈ ಮುರಿದು ತಲೆಗೆ ತೀವ್ರ ಪೆಟ್ಟಾಗಿದೆ.ಈ ಘಟನೆ ಕೊಯಮತ್ತೂರಿನ ಮಲುಮಿಚಂಪಟ್ಟಿ ಬಳಿಯ ಮೈಲೇರಿಪಾಳ್ಯಂನಲ್ಲಿ ಸೋಮವಾರ (ಅ.28) ಸಂಜೆ ನಡೆದಿದೆ. ವಿದ್ಯಾರ್ಥಿ ಪ್ರಭು, ಈರೋಡ್ ಜಿಲ್ಲೆಯ ಪೆರುಂದರೈ ಬಳಿಯ ಮೆಕ್ಕೂರು ಗ್ರಾಮದ ನಿವಾಸಿ. ಮೂರನೇ ವರ್ಷದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ ವಿದ್ಯಾರ್ಥಿಯಾಗಿರುವ ಪ್ರಭು, ಕಾಲೇಜು ಹಾಸ್ಟೆಲ್ನಲ್ಲಿ ಉಳಿದುಕೊಂಡು ಓದುತ್ತಿದ್ದಾರೆ

Share with friends

Related Post

Leave a Reply

Your email address will not be published. Required fields are marked *