ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿರುವ ಹಿಂದೂ ವಿದ್ಯಾರ್ಥಿಗಳುನಾವು ನಮ್ಮ ಮುಸ್ಲಿಂ ಗೆಳೆಯರಿಗಾಗಿ ಪ್ರತಿದಿನ ಇಫ್ತಾರ್ ಕೂಟ ನಡೆಸುತ್ತಿದ್ದೇವೆ ಎಂದು ಹಿಂದೂ ವಿದ್ಯಾರ್ಥಿಗಳು ಬಹಳ ಸಂತೋಷದಿಂದಲೇ ಹೇಳುತ್ತಾರೆ.ಮುಸ್ಲಿಂ ವಿದ್ಯಾರ್ಥಿಗಳಿಗಾಗಿ ಇಫ್ತಾರ್ ಕೂಟ ಏರ್ಪಡಿಸುತ್ತಿರುವ ಹಿಂದೂ ವಿದ್ಯಾರ್ಥಿಗಳು“ಈ ರೀತಿ ಮಾಡುವುದರಿಂದ ನಮ್ಮ ಮನಸ್ಸಿಗೆ ಸಮಾಧಾನ ಉಂಟಾಗುತ್ತಿದೆ. ನಾವೂ ರಮಝಾನಿನ ಭಾಗವಾಗಲು ಬಯಸಿದ್ದೇವೆ. ಈ ಸೌಹಾರ್ದ ಪರಿಸರ ಸಂತಸಕರ” ಎಂದು ಹಿಂದೂ ವಿದ್ಯಾರ್ಥಿನಿಯೊಬ್ಬಳು ಪ್ರತಿಕ್ರಿಯಿಸಿದ್ದಾಳೆ.ನಾನಾ ನಂಬಿಕೆಗಳ ವಿದ್ಯಾರ್ಥಿಗಳ ನಡುವೆ ಸೌಹಾರ್ದತೆ ಮತ್ತು ಸ್ನೇಹದ ಪರಿಸರವನ್ನು ಇಫ್ತಾರ್ ತರುತ್ತದೆ. ಮುಖ್ಯವಾಗಿ ಪರಸ್ಪರ ನಂಬಿಕೆ ಮತ್ತು ಗೌರವಿಸುವಿಕೆ ನಾನಾ ಸಂಸ್ಕೃತಿಗಳ ನಡುವೆ ಒಡಮೂಡುತ್ತದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ರಮದಾನ್ ಅನುಭವಿಸುತ್ತಿದ್ದೇನೆ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದರು.ಬೀದರ್: ಬೀದರ್’ನಲ್ಲಿ ರಮಝಾನ್ ಉಪವಾಸ ಆಚರಿಸುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಹಿಂದೂ ವಿದ್ಯಾರ್ಥಿಗಳೆಲ್ಲರೂ ಸೇರಿ ಇಫ್ತಾರ್ ಕೂಟಗಳನ್ನು ಏರ್ಪಡಿಸಿ ಸೌಹಾರ್ದ ಮೆರೆದಿದ್ದಾರೆ.ಶಹೀನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಟ್’ಗಳ ವಿದ್ಯಾರ್ಥಿಗಳು ಪ್ರತಿ ದಿನ ಇಫ್ತಾರ್’ಗಾಗಿ ಹಣ್ಣುಗಳ, ಪೊಕೋಡಗಳ ಮತ್ತು ರೂ ಅಫ್ಝಾ ಪಾನಕಗಳನ್ನು ಸಿದ್ಧ ಪಡಿಸುತ್ತಾರೆ. ಮುಸ್ಲಿಮೇತರ ವಿದ್ಯಾರ್ಥಿಗಳು ನೀಡುವ ಲಘು ಆಹಾರದಿಂದ ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ದಿನದ ಉಪವಾಸ ಮುಗಿಸುತ್ತಾರೆ.“ನನ್ನ ಮುಸ್ಲಿಂ ಮಿತ್ರರಿಗೆ ಇಫ್ತಾರ್ ಸಹಾಯ ಮಾಡಲು ನನಗೆ ಬಹಳ ಆನಂದವಾಗುತ್ತಿದೆ. ಒಟ್ಟಾರೆ ಇಫ್ತಾರ್ ಏಕತೆಯನ್ನು ಬಲಪಡಿಸುತ್ತದೆ.”ಶಹೀನ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ ಗಳ ಸ್ಥಾಪಕರಾದ ಡಾ. ಅಬ್ದುಲ್ ಖದೀರ್ ಅವರು ಸುಮಾರು 4,500 ಮಂದಿ ಪ್ರತಿ ದಿನ ಇಫ್ತಾರ್ ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.“ನಮ್ಮ ಕ್ಯಾಂಪಸ್ ನಲ್ಲಿ ಪ್ರತಿದಿನ ಮುಸ್ಲಿಂ ಮತ್ತು ಮುಸ್ಲಿಮೇತರರು ಒಟ್ಟಾಗಿ ಇಫ್ತಾರ್ ಸಜ್ಜುಗೊಳಿಸುತ್ತಾರೆ. ಮುಸ್ಲಿಂ ವಿದ್ಯಾರ್ಥಿಗಳು ಉಪವಾಸ ಕಳೆದರೆ, ಮುಸ್ಲಿಮೇತರ ವಿದ್ಯಾರ್ಥಿಗಳು ಅವರಿಗೆ ಆಹಾರ ಪೂರೈಸುತ್ತಾರೆ. ಇದು ಶಾಂತಿ ಮತ್ತು ಪ್ರೀತಿಯ ಸಂದೇಶ ರವಾನಿಸುತ್ತದೆ” ಎಂದು ಖದೀರ್ ಹೇಳಿದರು.ಈ ವಿದ್ಯಾರ್ಥಿಗಳು ಸಮಾಜದ ಮತ್ತು ದೇಶದ ಒಳಿತಿಗೆ ದುಡಿಯುವವರಾಗುತ್ತಾರೆ ಎನ್ನುವುದು ನನ್ನ ಆಶಯ ಎಂದರವರು.ವೈವಿಧ್ಯತೆಯಲ್ಲಿ ಏಕತೆ ಸಾರುವ ಈ ಇಫ್ತಾರ್ ವಿದ್ಯಾರ್ಥಿಗಳಲ್ಲಿ ಪರಸ್ಪರ ಗೌರವ, ಅರಿತುಕೊಳ್ಳುವಿಕೆ, ಸಹನೆಯನ್ನು ಪ್ರೇರೇಪಿಸುತ್ತದೆ. ಗೆಳೆಯರಿಗೆ ಆಹಾರ ಸೇವೆ, ಸೇವನೆಯು ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದಿದ್ದು, ಒಂದು ಪರಸ್ಪರ ಕರುಣೆಯ ಬೆಳಗುವ ವಾತಾವರಣವನ್ನು ಉಂಟು ಮಾಡಿದೆ ಎಂಬುದು ಇಲ್ಲಿನವರ ಅಭಿಪ್ರಾಯವಾಗಿದೆ