BIG NEWS : ಕೊರೊನಾ ಬೆನ್ನಲ್ಲೆ ದೇಶದಲ್ಲಿ ಯೆಲ್ಲೋ ಫೀವರ್ʼ ಭೀತಿ : ಲಸಿಕೆ ಕಡ್ಡಾಯ, ನಿರ್ಲಕ್ಷಿಸಿದಿರಿ- ಕೇಂದ್ರ ಆರೋಗ್ಯ ಇಲಾಖೆ| Yellow fever

ಕೊರೊನಾ ಆತಂಕ ನಿಂತ ಬೆನ್ನಲ್ಲೆ ಹೊಸ ಆತಂಕ ಶುರುವಾಗಿದ್ದು, ಇದೀಗ ಯೆಲ್ಲೋ ಫೀವರ್ ಆರ್ಭಟ ಶುರುವಾಗಿದ್ದು, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.ಸದ್ಯ ದೇಶದಲ್ಲಿ ಕೋವಿಡ್ ಕಡಿಮೆಯಾಗುತ್ತಿದ್ದಂತೆ ಕೋವಿಡ್‌ನಿಂದ ಬಲುತ್ತಿದ್ದ ಜನರಿಗೆ ಹಳದಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇದೀಗ ಯೆಲ್ಲೋ ಫೀವರ್ ನಿಯಂತ್ರಕ್ಕೆ ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ.ಇದು ಮುಖ್ಯವಾಗಿ ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಉಲ್ಬಣಗೊಂಡಿದೆ, ಯೆಲ್ಲೋ ಫೀವರ್ ಲಸಿಕೆಗೆ‌ ಕೇಂದ್ರ ಆರೋಗ್ಯ ಇಲಾಖೆ 300 ರೂ. ನಿಗದಿ ಮಾಡಲಾಗಿದ್ದು, ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ ಲಭ್ಯವಿದೆ. ಸ್ಟಾ ಮರಿಲ್ ಎಂಬ ಹಳದಿ ಜ್ವರದ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದೆ.ಏನಿದು ಹಳದಿ ಜ್ವರ ?ಹಳದಿ ಜ್ವರವು ಗಂಭೀರವಾದ ಮತ್ತು ಮಾರಣಾಂತಿಕ ವೈರಸ್ ರೋಗವಾಗಿದ್ದು, ಇದು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಸೋಂಕು ಸೌಮ್ಯದಿಂದ ತೀವ್ರವಾಗಿ ಮಾರಣಾಂತಿಕವಾಗಿರಬಹುದು. ಸೋಂಕು ತಗುಲಿದ ಹೆಚ್ಚಿನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಹಳದಿ ಜ್ವರ ಲಸಿಕೆಯ ಸೀಮಿತ ಪೂರೈಕೆ ಇರುವುದರಿಂದ ಲಸಿಕೆಯನ್ನು ಪಡೆಯಲು ಸುಧಾರಿತ ಯೋಜನೆ ಅಗತ್ಯವಿದೆ.ಹಳದಿ ಜ್ವರದ ಲಕ್ಷಣಗಳೇನು ಗೊತ್ತಾ?ಹಳದಿ ಜ್ವರದ ಅತ್ಯಂತ ಗುರುತಿಸಬಹುದಾದ ಲಕ್ಷಣವೆಂದರೆ ಚರ್ಮ ಮತ್ತು ಕಣ್ಣುಗಳು ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುವುದು. ಮಾತ್ರವಲ್ಲ ಜ್ವರ ತರಹದ ಲಕ್ಷಣಗಳು ಸ್ನಾಯು ನೋವು, ತಲೆನೋವು ,ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿರಬಹುದು. ಹಳದಿ ಜ್ವರವನ್ನು ಪಡೆಯುವ ಸುಮಾರು 15 ಪ್ರತಿಶತದಷ್ಟು ಜನರು ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುವ ಗಂಭೀರ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತಾರೆ.ಹಳದಿ ಜ್ವರ ಹರಡುವುದೇಗೆ?ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ವೈರಸ್ ಹರಡುತ್ತದೆ, ಆದ್ದರಿಂದ ಹಳದಿ ಜ್ವರ ಬರದಂತಿರಲು, ಪ್ರಯಾಣಿಕರು ಸೊಳ್ಳೆಯಿಂದ (Mosquito) ಹರಡುವ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಸಾಧ್ಯವಿಲ್ಲ.ಹಳದಿ ಜ್ವರವನ್ನು ತಡೆಗಟ್ಟು ಸೂಕ್ತ ಲಸಿಕೆ ಹಾಕಿಸಿಕೊಳ್ಳುವಂತೆ ಎಚ್ಚರಿಕೆಯ ಸಂದೇಶವನ್ನು ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ನೀಡಿದ್ದು, ಯಾರೂ ಈ ಮಾರಣಾಂತಿಕ ಜ್ವರದ ಬಗ್ಗೆ ನಿರ್ಲಕ್ಷ್ಯಿಸದಿರಿ ಎಂದೆನ್ನಲಾಗಿದೆ.

Share with friends

Related Post

Leave a Reply

Your email address will not be published.