BIGG NEWS Karnataka Assembly Election 2023

ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ದಿನಾಂಕ ಪ್ರಕಟವಾಗಿದೆ. ಮೇ.10ರಂದು ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೇ.13ರಂದು ಮತಏಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ.ದಿನಾಂಕ 29-03-2023ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ನೀತಿ ಸಂಹಿತೆ ( Election Code of Conduct ) ವೇಳೆ ಯಾವುದಕ್ಕೆ ನಿರ್ಬಂಧ.? ಯಾವುದಕ್ಕೆ ಅನುಮತಿ ಎನ್ನುವ ಬಗ್ಗೆ ಮುಂದೆ ಓದಿ.ದಿನಾಂಕ 29-01-2023ರಂದು ಕೇಂದ್ರ ಚುನಾವಣಾ ಆಯೋಗದ ( Election Commission of India ) ಮುಖ್ಯ ಆಯುಕ್ತರು ಸುದ್ಧಿಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆಗೆ ಮೇ.10ರಂದು ಮತದಾನ, ಮೇ.13ರಂದು ಫಲಿತಾಂಶ ಪ್ರಕಟಿಸೋದಾಗಿ ಘೋಷಣೆ ಮಾಡಿದ್ದರು. ಅಂದಿನಿಂದಲೇ ರಾಜ್ಯಾಧ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಾಗಿತ್ತು.ಬಹುತೇಕರಿಗೆ ನೀತಿ ಸಂಹಿತೆಯ ( Code of Conduct ) ವೇಳೆಯಲ್ಲಿ ಯಾವುದಕ್ಕೆ ಅನುಮತಿ, ಮತ್ತೆ ಯಾವುದಕ್ಕೆ ಅನುಮತಿ ಇಲ್ಲ ಎಂಬುದೇ ಗೊಂದಲವಾಗಿದೆ. ಆ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ.ಯಾವುದಕ್ಕೆ ಅನುಮತಿ.?ಪ್ರಗತಿಯಲ್ಲಿರುವ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಬಹುದಾಗಿದೆ.ಈಗಾಗಲೇ ಜಾರಿಯಲ್ಲಿರುವ ಸರ್ಕಾರಿ ಕಾರ್ಯಕ್ರಮಗಳ ಮುಂದುವರಿಕೆಗೆ ಅನುಮತಿರಾಜ್ಯ ಸರ್ಕಾರದಿಂದ ಸಂಪುಟ ಸಭಎ ನಡೆಸಲು ಅನುಮತಿ. ಆದ್ರೇ ನಿರ್ಣಯ ಕೈಗೊಳ್ಳಲು ನಿರ್ಬಂಧಚುನಾವಣಾ ಆಯೋಗದಿಂದ ಅನುಮತಿ ಪಡೆದು ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅವಕಾಶಬರ ಮತ್ತು ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ಅಡ್ಡಿಯಿಲ್ಲ.ಕುಡಿಯುವ ನೀರು ಪೂರೈಕೆ, ಗೋಶಾಲೆ ತೆರೆಯಲು ಅಡ್ಡಿಯಿಲ್ಲ.ಸಾರ್ವಜನಿಕ ಬಳಕೆಯ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಉದ್ಘಾಟಿಸಬಹುದು.ಯಾವುದಕ್ಕೆ ನಿರ್ಬಂಧ.?ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ.ಹೊಸ ಯೋಜನೆ ಘೋಷಿಸುವಂತಿಲ್ಲ.ಹೊಸ ಯೋಜನೆಗಗಳನ್ನು ಉದ್ಘಾಟಿಸುವಂತಿಲ್ಲ, ಶಂಕು ಸ್ಥಾಪನೆ ಮಾಡುವಂತೆ ಇಲ್ಲ.ಹೊಸ ಯೋಜನೆಗೆ ಹಣ, ಟೆಂಡರ್ ಕರೆಯುವಂತಿಲ್ಲ.ಈಗಾಗಲೇ ಕರೆದಿದ್ದ ಟೆಂಡರ್ ಕೂಡ ಪೂರ್ಣಗೊಳಿಸುವಂತಿಲ್ಲ.ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ.ಅಧಿಕಾರಿಗಳ ಜೊತೆ ಸಚಿವರು, ಶಾಸಕರು ಸಭೆ ನಡೆಸುವಂತಿಲ್ಲ.ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ, ಆನಂತ್ರ ನಿರ್ಬಂಧ.ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವಂತಿಲ್ಲ.ಧರ್ಮ, ಜಾತಿ ವಿಷಯಾಧಾರಿತ ಮತ ಕೇಳುವಂತಿಲ್ಲ.ಚುನಾವಣಾ ನೀತಿಸಂಹಿತೆ ಯಾರಿಗೆಲ್ಲ ಅನ್ವಯ ಗೊತ್ತ?ಕಾರ್ಯಾಂಗ, ಶಾಸಕಾಂಗಕ್ಕೆಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯಸರ್ಕಾರದ ಎಲ್ಲಾ ಇಲಾಖೆ, ಸಂಸ್ಥೆಗಳು, ನಿಗಮ-ಮಂಡಳಿಗಳಿಗೆ ಅನ್ವಯ.ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವನ್ನು ಪಡೆಯುವ ಸಂಸ್ಥೆಗಳಿಗೆ ನೀತಿ ಸಂಹಿತೆ ಅನ್ವಯ.ರಾಜಕೀಯ ಪಕ್ಷದ ಅಭ್ಯರ್ಥಿಗಳು ಪಾಲನೆ ಕಡ್ಡಾಯ.ಈ ರೀತಿಯ ಚುನಾವಣಾ ಪ್ರಚಾರಕ್ಕೆ ನಿರ್ಬಂಧಒಬ್ಬರ ಕೆಲಸ ಕಾರ್ಯಗಳನ್ನು ಮತ್ತೊಬ್ಬರು ಟೀಕಿಸಿ, ಟಿಪ್ಪಣಿ ಮಾಡಲು ನಿರ್ಬಂಧವೈಯಕ್ತಿಕ ಟೀಕೆ, ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತ ಹೇಳಿಕೆ ನೀಡಲು ನಿರ್ಬಂಧ.ವೈಯಕ್ತಿಕ ನಿಂಧನೆ, ಜಾತಿ ನಿಂಧನೆಗೆ ಅವಕಾಶವಿಲ್ಲ.ಸಭೆ ಸಮಾರಂಭ ನಡೆಸಲು ಚುನಾವಣಾಧಿಕಾರಿ, ಪೊಲೀಸರ ಅನುಮತಿ ಕಡ್ಡಾಯ.ಜನರ ಖಾಸಗಿ ಬದುಕಿಗೆ ಧಕ್ಕೆ ತರುವಂತೆ ಪ್ರಚಾರ ಮಾಡುವಂತಿಲ್ಲ.

Share with friends

Related Post

Leave a Reply

Your email address will not be published.