BREAKING: ಪತಿ ಅಗಲಿದ 15 ದಿನಗಳ ಅಂತರದಲ್ಲೇ ಧ್ರುವನಾರಾಯಣ ಪತ್ನಿ ವೀಣಾ ನಿಧನಕಾಂಗ್ರೆಸ್ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅಗಲಿ ಇನ್ನು ಒಂದು ತಿಂಗಳೇ ಕಳೆದಿಲ್ಲ

BREAKING: ಪತಿ ಅಗಲಿದ 15 ದಿನಗಳ ಅಂತರದಲ್ಲೇ ಧ್ರುವನಾರಾಯಣ ಪತ್ನಿ ವೀಣಾ ನಿಧನಕಾಂಗ್ರೆಸ್ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅಗಲಿ ಇನ್ನು ಒಂದು ತಿಂಗಳೇ ಕಳೆದಿಲ್ಲ. ಈ ದುಃಖ ಮಾಸುವ ಮುನ್ನವೇ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ ಪತ್ನಿ ವೀಣಾ ವಿಧಿವಶರಾಗಿದ್ದಾರೆ.ವೀಣಾ ಧ್ರುವನಾರಾಯಣ ಅವರಿಗೆ 55 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಕಳೆದ ಮಾರ್ಚ್ 11ರಂದು ಆರ್‌. ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಧ್ರುವನಾರಾಯಣ್ ನಿಧನದ ನಂತರ ವೀಣಾ ಅವರ ಕಾಯಿಲೆ ಮತ್ತಷ್ಟು ಉಲ್ಭಣಿಸಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೀಣಾ ಮೃತಪಟ್ಟಿದ್ದಾರೆ.ಧ್ರುವನಾರಾಯಣ್‌ಗೆ ದರ್ಶನ್ ಮತ್ತು ಧೀರನ್ ಇಬ್ಬರು ಪುತ್ರರಿದ್ದಾರೆ. ಕೇವಲ 15 ದಿನಗಳ ಅಂತರದಲ್ಲೇ ಪತಿ, ಪತ್ನಿ ನಿಧನದಿಂದ ಧ್ರುವನಾರಾಯಣ್ ಮಕ್ಕಳು ಕಂಗಾಲಾಗಿದ್ದಾರೆ.

Share with friends

Related Post

Leave a Reply

Your email address will not be published.