BREAKING NEWS: 2023-24ನೇ ಸಾಲಿನ ‘ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ: ಮೇ.29ರಿಂದ ಶಾಲೆ ಆರಂಭ, ಅ.8ರಿಂದ ದಸರಾ ರಜೆ

2023-24ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವೇಳಾಪಟ್ಟಿಯನ್ನು ( Annual Academic Schedule ) ಸಾರ್ವಜನಿಕ ಶಿಕ್ಷಣ ಇಲಾಖೆಯು ( School Education Department ) ಪ್ರಕಟಿಸಿದೆ. ಅದರಂತೆ ಈ ಬಾರಿ ಬೇಸಿಗೆ ರಜೆಯ ( Summer Holiday ) ಮುಕ್ತಾಯದ ನಂತ್ರ ಮೇ.29ರಿಂದಲೇ ಶಾಲೆಗಳು ಆರಂಭಗೊಳ್ಳಲಿವೆ ( School Open ).

ಅ.8ರಿಂದ ದಸರಾ ಹಾಗೂ ದಿನಾಂಕ 11-04-2024ರಿಂದ ಬೇಸಿಗೆ ರಜೆ ಆರಂಭಗೊಳ್ಳಲಿದೆ.ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿದ್ದು, ರಾಜ್ಯಾಧ್ಯಂತ ಏಕರೂಪದ ಯಶಸ್ವಿ ಅನುಷ್ಠಆನಕ್ಕಾಗಿ ವಾರ್ಷಿಕ ಶಿಕ್ಷಣಿಕ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದಿದ್ದಾರೆ.ಶಿಕ್ಷಣ ಇಲಾಖೆಯ ( Education Department ) ಮಾರ್ಗಸೂಚಿಯಂತೆ ವಾರ್ಷಿಕ, ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಪರೀಕ್ಷೆ ಹಾಗೂ ಮೌಲ್ಯಾಂಕನ ವಿಶ್ಲೇಷಣೆ, ಗುಣಮಟ್ಟದ ಶಿಕ್ಷಮಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳ ನಿರ್ವಹಮೆ ಹಾಗೂ ವಿವಿಧ ಶಾಲಾ ಹಂತದ ಸಿಸಿ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ದಿನಾಂಕ 29-05-2023ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿತ್ತು. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆಯ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳ್ನು ಜಾರಿಗೊಳಿಸಲು ಅನುಕೂಲವಾಗುವಂತೆ ಶೈಕ್ಷಣಿಕ ಅವಧಿಗಳು, ರಜಾ ದಿನಗಳು ಮತ್ತು ವಾರ್ಷಿಕ ಕಾರ್ಯಸೂಚಿಯನ್ನು ನಿಗಧಿಪಡಿಸಲಾಗಿದೆ. ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ತಿಳಿಸಿದ್ದಾರೆ.ಶಾಲಾ ಕರ್ತವ್ಯದ ದಿನಗಳುದಿನಾಂಕ 29-05-2023 ರಿಂದ ದಿನಾಂಕ 07-10-2023ರವರೆಗೆ ಮೊದಲನೇ ಅವಧಿಗೆ ಶಾಲಾ ಕರ್ತವ್ಯ ದಿನಗಳನ್ನು ನಿಗಧಿ ಪಡಿಸಲಾಗಿದೆ.ದಿನಾಂಕ 25-10-2023ರಿಂದ ದಿನಾಂಕ 10-04-2024ರವರೆಗೆ ಎರಡನೇ ಅವಧಿಗೆ ಶಾಲಾ ಕರ್ತವ್ಯದ ದಿನಗಳನ್ನು ನಿಗಧಿ ಪಡಿಸಲಾಗಿದೆ.ರಜಾ ದಿನಗಳುದಸರಾ ರಜೆಯನ್ನು ಈ ಬಾರಿ ದಿನಾಂಕ 08-10-2023ರಿಂದ ದಿನಾಂಕ 24-10-203ರವರೆಗೆ ನೀಡಲಾಗಿದೆ.ಬೇಸಿಗೆ ರಜೆಯನ್ನು ದಿನಾಂಕ 11-04-2024ರಿಂದ ದಿನಾಂಕ 28-05-2024ರವರೆಗೆ ನೀಡಲಾಗಿದೆ.ವರದಿ: ವಸಂತ ಬಿ ಈಶ್ವರಗೆರೆ

Share with friends

Related Post

Leave a Reply

Your email address will not be published.