Browse

ಅನ್ಸಾರಿ ಸಮ್ಮುಖದಲ್ಲಿ ಕೈ ಹಿಡಿದ BJPಯ ವಿಠಲಾಪೂರ ಯಮನಪ್ಪ,ಸಣ್ಣಕ್ಕಿ ನೀಲಪ್ಪ ಬಿಜೆಪಿಯ ಹಿರಿಯ ಮುಖಂಡರಾದ,

ಅನ್ಸಾರಿ ಸಮ್ಮುಖದಲ್ಲಿ ಕೈ ಹಿಡಿದ BJPಯ ವಿಠಲಾಪೂರ ಯಮನಪ್ಪ,ಸಣ್ಣಕ್ಕಿ ನೀಲಪ್ಪ ಬಿಜೆಪಿಯ ಹಿರಿಯ ಮುಖಂಡರಾದ, ಹಾಲುಮತ ಸಮಾಜದ ವಿಠಲಾಪೂರ ಯಮನಪ್ಪ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ ಮಾಜಿ ಸಚಿವ, ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರುಅನ್ಸಾರಿ ನಿವಾಸದಲ್ಲಿ ಕಾಂಗ್ರೆಸ್ ಧ್ವಜ ನೀಡಿ ಬಿಜೆಪಿ ಮುಖಂಡರನ್ನು ಸ್ವಾಗತಿಸಿದರು. ಈ ವೇಳೆ ಇಕ್ಬಾಲ್ ಅನ್ಸಾರಿ ಮಾತನಾಡಿ, ಹಿರಿಯರಾದ ವಿಠಲಾಪೂರ ಯಮನಪ್ಪ ಹಾಗೂ ಸಣ್ಣಕ್ಕಿ ನೀಲಪ್ಪ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಿದೆ. ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಹೆಚ್ಚಿನ ಸ್ಥಾನಗಳು ಗೆಲ್ಲಬೇಕಿದ್ದು ಎಸ್ಸಿ ಎಸ್ಟಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ ಗೆ ಬೆಂಬಲ‌ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮಗೌಡ, ಕಾಂಗ್ರೆಸ್ ಮುಖಂಡರಾದ ಫಕೀರಪ್ಪ ಎಮ್ಮಿ, ಅನರೇಶ ಗೋನಾಳ,ಎಸ್.ಬಿ.ಖಾದ್ರಿ,ಶಾಮೀದ್ ಮನಿಯಾರ‌ ಸೇರಿ ಅನೇಕರಿದ್ದರು.

Share with friends