ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿ: RCB ಗೆ ರಾಜ್ಯ ಸರ್ಕಾರದ ಒತ್ತಡ!

ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಗೆ ರಾಜ್ಯ ಸರ್ಕಾರ ಒತ್ತಡ ಹಾಕುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.ವರದಿಯ ಪ್ರಕಾರ, ರಾಜ್ಯ ಸರ್ಕಾರ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಮೇಲೆ ಒತ್ತಡ ಹೇರಿದೆಯಂತೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ ಎಂಬ ಟೀಕೆಗಳು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಇದಾಗ್ಯೂ ಸ್ಥಳೀಯ ಆಟಗಾರರಿಗೆ ಆರ್ಸಿಬಿ ಮಣೆ ಹಾಕಿದ್ದು ತುಂಬಾ ವಿರಳ. ಅದರಲ್ಲೂ ಕಳೆದ ಬಾರಿಯ ತಂಡದಲ್ಲಿದ್ದದ್ದು ಕರ್ನಾಟಕದ ಇಬ್ಬರು ಆಟಗಾರರು ಮಾತ್ರ.ಇವರಲ್ಲಿ ವಿಜಯಕುಮಾರ್ ವೈಶಾಕ್ 4 ಪಂದ್ಯಗಳನ್ನಾಡಿದರೆ, ಮನೋಜ್ ಭಾಂಡಗೆ ಬೆಂಚ್ ಕಾದಿದ್ದೇ ಬಂತು. ಇತ್ತ ಮಹಾರಾಜ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾಂಡಗೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದರು. ಇದರ ಬೆನ್ನಲ್ಲೇ ಯುವ ಆಟಗಾರನನ್ನು ಇಡೀ ಸೀಸನ್ನಲ್ಲಿ ಬೆಂಚ್ ಕಾಯಿಸಿದ ಆರ್ಸಿಬಿ ಫ್ರಾಂಚೈಸಿಯ ನಡೆಯ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು.ಇದೀಗ ಐಪಿಎಲ್ನ 18ನೇ ಆವೃತ್ತಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜ್ಯ ಸರ್ಕಾರದ ಮೂಲಗಳು ಸೂಚಿಸಿವೆ ಎಂದು ವದಿಯಾಗಿದೆ
Share with friends

Related Post

Leave a Reply

Your email address will not be published.